ವೃತ್ತಿ ಜೀವನ, ಚಾರಿತ್ರ, ವ್ಯಕ್ತಿತ್ವದ ಕುರಿತು ರಾಜ್ಯವ್ಯಾಪಿ ಅಭಿಯಾನ

Update: 2017-08-18 13:58 GMT

ಉಡುಪಿ, ಆ.18: ಕರ್ನಾಟಕ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ವತಿ ಯಿಂದ ವೃತ್ತಿ ಜೀವನ, ಚಾರಿತ್ರ ಮತ್ತು ವ್ಯಕ್ತಿತ್ವ ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯ ವ್ಯಾಪಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಮೌಲ್ಯಾಧಾರಿತ ಶಿಕ್ಷಣವನ್ನು ಉತ್ತೇಜಿಸುವುದು, ಶಿಕ್ಷಣದ ನೈಜ ಉದ್ದೇಶ ಗಳನ್ನು ಪುನಶ್ಚೇತನಗೊಳಿಸುವುದು, ಸಮಾಜದ ಪರ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಗುರಿಯಾಗಿದೆ ಎಂದು ಜಿಐಓ ರಾಜ್ಯಾಧ್ಯಕ್ಷೆ ನವಿದಾ ಹುಸೇನ್ ಅಸಾದಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

10 ದಿನಗಳ ಈ ಅಭಿಯಾನದಲ್ಲಿ ಪ್ರೌಢಶಾಲೆ, ಕಾಲೇಜು ಹಾಗೂ ಟ್ಯುಟೋರಿಯಲ್‌ಗಳಲ್ಲಿ ಸ್ಪರ್ಧೆ ಹಾಗೂ ಉಪನ್ಯಾಸ, ವೈಯಕ್ತಿಕ ಮತ್ತು ಸಾಮೂಹಿಕ ಭೇಟಿಗಳು, ಫೋಲ್ಡರ್‌ಗಳ ವಿತರಣೆ, ಶಾರ್ಟ್ ಕ್ಲಿಪ್ಸ್ ತಯಾರಿ, ವಿದ್ಯಾರ್ಥಿಗಳ ಸಮ್ಮೇಳನ, ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ವಿಶೇಷ ಕಾರ್ಯ ಕ್ರಮಗಳು, ಕಾಲೇಜು ವಿದ್ಯಾರ್ಥಿ ನಾಯಕರೊಂದಿಗೆ ಭೇಟಿ, ಶೈಕ್ಷಣಿಕ ಮಾದರಿ ಪ್ರದರ್ಶನ ಹಾಗೂ ಜಿಲ್ಲೆ, ತಾಲೂಕು ಮತ್ತು ಪ್ರಾದೇಶಿಕ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಐಒ ಉಡುಪಿ ಜಿಲ್ಲಾ ಸಂಚಾಲಕಿ ಮರಿಯಮ್ ಅಸಾದಿ, ಜಿಲ್ಲಾ ಉಪಸಂಚಾಲಕಿ ಸುಹಾ ಫಾತಿಮಾ, ಮಾಧ್ಯಮ ಕಾರ್ಯ ದರ್ಶಿ ರಶಾ ಫಾತಿಮಾ, ನವಾಲ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News