ಬೆಳ್ತಂಗಡಿ: ವಿಶೇಷ ವ್ಯಕ್ತಿತ್ವ ವಿಕಸನ ಶಿಬಿರ

Update: 2017-08-18 17:46 GMT

ಬೆಳ್ತಂಗಡಿ, ಆ.18: ವ್ಯಕ್ತಿತ್ವ ವಿಕಸನ ಎಂದರೆ ನಮ್ಮನ್ನು ನಾವೇ ಅರ್ಥ ಮಾಡಿಕೊಂಡು ನಮ್ಮೊಳಗಿರುವ ಶಕ್ತಿ ಮತ್ತು ಪ್ರತಿಭೆಯನ್ನು ಹೊರಸೂಸಿಕೊಳ್ಳು ವುದು ಮತ್ತು ಆ ಮೂಲಕ ನಮ್ಮನ್ನು ನಾವೇ ಎತ್ತರಿಸಿಕೊಳ್ಳುವುದು ಎಂದು ತಾ.ಪಂ ಅಧ್ಯಕ್ಷ ದಿವ್ಯಜ್ಯೋತಿ ಹೇಳಿದರು.

ಅವರು, ರಾಜ್ಯ ಮಲೆಕುಡಿಯರ ಸಂಘ ಕರ್ನಾಟಕ ತಾಲೂಕು ಸಮಿತಿ ಬೆಳ್ತಂಗಡಿ ಹಾಗೂ ವಿಶ್ವ ಚೇತನ ಪ್ರತಿಷ್ಠಾನ ತುಮಕೂರು ಇವರ ಜಂಟಿ ಆಶ್ರಯದಲ್ಲಿ ಕೊಯ್ಯೂರು ತಿರುವು ರಸ್ತೆಯ ಬಳಿಯ "ಶಿವಗಿರಿ" ಮಲೆಕುಡಿಯ ಸಮಾಜ ಮಂದಿರದಲ್ಲಿ ಆಯೋಜಿಸಿದ್ದ ವಿಶೇಷ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಅಶ್ರಫ್ ಆಲಿಕುಂಞಿ ಮಾತನಾಡಿ, ಶುಭ ಹಾರೈಸಿದರು. ತಾ.ಪಂ. ಸದಸ್ಯ ಜಯಾಮ, ಜಿಲ್ಲಾ ಮಲೆಕುಡಿಯರ ಸಂಘದ ಅಧ್ಯಕ್ಷ ಸಂಜೀವ ಕುಲ್ಲಾಜೆ, ಮಲೆಕುಡಿಯ ತಾ ಸಮಿತಿ ಅಧ್ಯಕ್ಷ ನೋಣಯ್ಯ ಮಚ್ಚಿನ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಅಣ್ಣಪ್ಪ ಎನ್ ಮಲೆಕುಡಿಯ ವಹಿಸಿದ್ದರು.

ರಾಜ್ಯ ಕಾರ್ಯದರ್ಶಿ ಶ್ರೀಧರ್ ಈದು ಪ್ರಸ್ತಾವನೆಗೈದರು. ವಿಶೇಷ ವ್ಯಕ್ತಿತ್ವ ಶಿಬಿರವನ್ನು ತುಮಕೂರು ವಿಶ್ವಚೇತನ ಪ್ರತಿಷ್ಠಾನದ ಅಧ್ಯಕ್ಷ ಪಿ.ಎಂ ಪ್ರಸನ್ನ ಕುಮಾರ್ ನಡೆಸಿಕೊಟ್ಟರು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು. ಐ. ಎಲ್ ಪಿಂಟೋ ಕೊಪ್ಪದಗಂಡಿ ವಿಶೇಷ ನೆರವು ನೀಡಿದರು. ತಾ ಪ್ರ. ಕಾರ್ಯದರ್ಶಿ ಹರೀಶ್ ಎಳನೀರು ವಂದನಾರ್ಪಣೆಗೈದರು. ಉಪಾಧ್ಯಕ್ಷೆ ಸುಜಾತಾ ಉಜಿರೆ ಸ್ವಾಗತಿಸಿದರು. ಕೋಶಾಧಿಕಾರಿ ಮೋಹನ್ ನಿಡ್ಲೆ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News