ಆ. 21ರವರೆಗೆ ವಜ್ರಾಭರಣಗಳ ವಿಶೇಷ ಪ್ರದರ್ಶನ

Update: 2017-08-19 14:25 GMT

ಮಂಗಳೂರು, ಆ.19: ಇಜಿಎಲ್ ಇಂಟರ್‌ನ್ಯಾಷನಲ್ ಹಾಗೂ ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಂಕನಾಡಿಯ ಟ್ರೇಡರ್ಸ್ ಹೊಟೇಲ್ (ಸುಲ್ತಾನ್ ಗೋಲ್ಡ್‌ನ ಎದುರು)ನಲ್ಲಿ ಇಂದು ಆರಂಭಗೊಂಡಿರುವ ವಜ್ರಾಭರಣಗಳ ವಿಶೇಷ ಪ್ರದರ್ಶನ ಆ. 21ರವರೆಗೆ ಮುಂದುವರಿಯಲಿದೆ.

ಆರಂಭಿಕ ದರ 15,000 ರೂ.ನಿಂದ ಆರಂಭಿಸಿ ವಜ್ರದ ಕಿವಿಯೋಲೆ, ಪೆಂಡೆಂಟ್ ಸೆಟ್, ಉಂಗುರ, ಕೈಬಳೆಗಳು, ನೆಕ್ಲೇಸ್ ಹಾಗೂ ಇತರ ಆಭರಣಗಳು ವಿವಿಧ ವಿನ್ಯಾಸ ಹಾಗೂ ಅಪಾರ ಸಂಗ್ರಹದೊಂದಿಗೆ ಗ್ರಾಹಕರಿಗೆ ಲಭ್ಯವಿದೆ.

ವಜ್ರದ ಕ್ಯಾರೆಟ್ ದರದಲ್ಲಿ ಅತಿ ಕಡಿಮೆ ಮೇಕಿಂಗ್ ಚಾರ್ಜ್‌ನ ಖಾತರಿಯೊಂದಿಗೆ ಗ್ರಾಹಕರು ತಮ್ಮ ಆಯ್ಕೆ ಹಾಗೂ ಅಭಿರುಚಿಯ ವಿವಿಧ ನಮೂನೆಯ ವಜ್ರಾಭರಣಗಳನ್ನು ಈ ಪ್ರದರ್ಶನದಲ್ಲಿ ಖರೀದಿಸಬಹುದಾಗಿದೆ. ಪ್ರದರ್ಶನವು ಬೆಳಗ್ಗೆ 11ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ ಎಂದು ಆಯೋಜಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News