ಉಪ್ಪಿನಂಗಡಿ ಮದ್ರಸ ಎಸ್.ಕೆ.ಎಸ್.ಬಿ.ವಿ. ಸಮಿತಿ ರಚನೆ

Update: 2017-08-20 08:28 GMT

ಉಪ್ಪಿನಂಗಡಿ, ಆ.20: ಸಮಸ್ತ ಕೇರಳ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧೀನದಲ್ಲಿರುವ ಉಪ್ಪಿನಂಗಡಿ ರೇಂಜ್ ಕೇಂದ್ರವಾದ ತನ್ವೀರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಸಂಘಟನೆ ಸಮಸ್ತ ಕೇರಳ ಸುನ್ನಿ ಬಾಲವೇದಿ(ಎಸ್.ಕೆ.ಎಸ್.ಬಿ.ವಿ.) ಇದರ ಮಹಾಸಭೆಯು ಇತ್ತೀಚೆಗೆ ನಡೆಯಿತು.

ತನ್ವೀರುಲ್ ಇಸ್ಲಾಂ ಮದ್ರಸದ ಮುಖ್ಯ ಶಿಕ್ಷಕ ಅಬೂಬಕರ್ ಸಿದ್ದೀಕ್ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ಸ್ಕೂಲ್ ಮದ್ರಸ ಮುಖ್ಯ ಶಿಕ್ಷಕ ಕೆ.ಎಚ್.ಅಶ್ರಪ್ ಹನೀಫಿ ಕರಾಯ, ಶಿಕ್ಷಕರಾದ ಮುಹಮ್ಮದ್ ಅಲಿ ಮುಸ್ಲಿಯಾರ್, ಅಬ್ದುಲ್ ಅಝೀಝ್ ಫೈಝಿ ಕರಾಯ, ಹೈದರ್ ಸಅದಿ ಮಠ, ಉಪಸ್ಥಿತರಿದ್ದರು. ಈ ವೇಳೆ 2017-18ನೆ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ಮುಸ್ತಫಾ ಕಡವಿನಬಾಗಿಲು, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯೀಲ್ ಇಜಾಝ್, ಕೋಶಾಧಿಕಾರಿಯಾಗಿ ಮುಹಮ್ಮದ್ ಇರ್ಷಾದ್, ಉಪಾಧ್ಯಕ್ಷರಾಗಿ ಆದಂ ಹುದೈಫ್, ಮಾಹಿನ್ ರಹೀಸ್ ಬಿ.ಕೆ., ಜತೆ ಕಾರ್ಯದರ್ಶಿಯಾಗಿ ಉಸ್ಮಾನ್ ರನೀಶ್, ಮುಹಮ್ಮದ್ ನಿಯಾಝ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಝೀಂ, ಸಿಝಾನ್ ಹಸನ್, ಶಬೀಬ್ ಅಶ್ಫಾಕ್, ಝೈನುದ್ದೀನ್, ಸುರೈಝ್, ಅರಾಫತ್, ಸಿನಾನ್ ಅಫ್ರಾಝ್ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News