ತೆಂಕುತಿಟ್ಟು ಯಕ್ಷಗಾನ ಹಾಡುಗಳ ಛಂದಸ್ಸು ದಾಖಲೀಕರಣ

Update: 2017-08-20 08:36 GMT

ಮೂಡುಬಿದಿರೆ, ಆ.20: ಮಣಿ ಕೃಷ್ಣಸ್ವಾಮಿ ಅಕಾಡಮಿ ಮತ್ತು ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ತೆಂಕುತಿಟ್ಟು ಯಕ್ಷಗಾನ ಹಾಡುಗಳ ಛಂದಸ್ಸು ದಾಖಲೀಕರಣದ 2ನೇ ಭಾಗ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ರವಿವಾರ ನಡೆಯಿತು. 

ಬಲಿಪ ನಾರಾಯಣ ಭಾಗವತರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸುಮಾರು ಮೂರುವರೆ ಗಂಟೆಗಳ ಕಾಲ ನಡೆದ ದಾಖಲೀಕರಣ ಕಾರ್ಯಕ್ರಮದಲ್ಲಿ ಬಲಿಪ ನಾರಾಯಣ ಭಾಗವತ-ಶಿವಶಂಕರ ಬಲಿಪ ಭಾಗವತರ ಹಾಡುಗಾರಿಕೆಗೆ ಕೃಷ್ಣಪ್ರಕಾಶ್ ಉಳಿತ್ತಾಯ ಮದ್ದಲೆ, ಶ್ರೀಧರ್ ಡಿ.ಎಸ್. ನಿರೂಪಣೆಯಿತ್ತು. ಮಣಿ ಕೃಷ್ಣಸ್ವಾಮಿ ಅಕಾಡಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್ ಪಿ. ಕಾರ್ಯಕ್ರಮ ಸಂಯೋಜಿಸಿದ್ದು, ಉಪನ್ಯಾಸಕ ವಿನಾಯಕ ಭಟ್ ಗಾಳಿಮನೆ, ಆಳ್ವಾಸ್ ಧೀಂ ಕಿಟ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News