‘ಹೆಣ್ಮಕ್ಕಳು ಶಾಲೆಗೆ ಯಾಕೆ ಹೋಗುತ್ತಾರೆ?’: ಸಂವಾದ ಕಾರ್ಯಕ್ರಮ

Update: 2017-08-20 17:15 GMT

ಮಂಗಳೂರು, ಆ. 20: ‘ಪೊಣ್ಣುಲು ಸಯ್ಯೆರೆ ಕಲ್ಪೆರೆಗ್ ಸಾಲೆ ಸೇರುವೆರಾ? (ಹುಡುಗಿಯರು ಸಾಯುವುದನ್ನು ಕಲಿಯಲು ಶಾಲೆಗೆ ಸೇರುತ್ತಾರೆಯೇ?) ಎಂಬ ವಿಷಯವಾಗಿ ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರದ ವತಿಯಿಂದ ನಗರದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.

ಸಂಚಾಲಕ ಪೇರೂರು ಜಾರು, ಲೇಖಕ ಪ್ರವೀಣ್ ಶೆಟ್ಟಿ ಮಾತನಾಡಿದರು. ಉಡುಪಿ ಬಾಳಿಗಾ ಕಾಲೇಜಿನ ಸೌಮ್ಯ, ಸುಮಿತ್ರಾ ಮತ್ತು ಜೀವನ್ ಲೂವಿಸ್ ವೈಜ್ಞಾನಿಕವಾಗಿ ಆತ್ಮಹತ್ಯೆಯ ಸಮಸ್ಯೆಗಳನ್ನು ತೆರೆದಿಟ್ಟರು. ಕೃಷ್ಣಪ್ಪಎಂ, ತಿಮ್ಮಪ್ಪ ಪೂಜಾರಿ, ನವೀನ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News