'ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ' ಕಾರ್ಯಕ್ರಮ

Update: 2017-08-22 03:23 GMT

ಬೆಳ್ತಂಗಡಿ, ಆ.22: ರಾಷ್ಟ್ರೀಯ ಅಭಿಯಾನದ ಪ್ರಯುಕ್ತ 'ಕಾನ೯ರ್ ಮೀಟ್' ಉಜಿರೆಯಲ್ಲಿ ಪ್ರಾರಂಭಗೊಂಡು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಸಂಜೆ 7:30ಕ್ಕೆ ಕುವೆಟ್ಟು ಗ್ರಾಮದ ಸುನ್ನತ್ ಕೆರೆಯಲ್ಲಿ ಸಾವ೯ಜನಿಕ ಕಾರ್ಯಕ್ರಮದ ಮೂಲಕ ಸಮಾಪನಗೊಂಡಿತು.

ಸಭೆಯ ಅದ್ಯಕ್ಷೆತಯನ್ನು ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ನವಾಝ್ ಶರೀಫ್   ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ  ಎ.ಕೆ ಅಶ್ರಫ್, ಅತಿಥಿಗಳಾಗಿ ಎಸ್ ಡಿ ಪಿ ಐ  ರಾಜ್ಯ ಕಾರ್ಯದರ್ಶಿ ಆಲ್ಫೋನ್ಸ್ ಫ್ರಾಂಕೋ, ಎಸ್ ಡಿ ಪಿ ಐ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಜಿಲ್ಲಾ ಉಪಾಧ್ಯಕ್ಷ ಅಂತೋಣಿ ಪಿಡಿ, ಜಿಲ್ಲಾ ಸಮಿತಿ ಸದಸ್ಯ  ಕಲಂದರ್ ಪತಿ೯ಪಾಡಿ,  ಪಿ ಎಫ್ಐ ಬೆಳ್ತಂಗಡಿ ಜಿಲ್ಲಾ ಅಧ್ಯಕ್ಷ  ಮುಸ್ತಫಾ ಪೆನೆ೯, ‌ಎಸ್ ಡಿ ಪಿ ಐ  ಬೆಳ್ತಂಗಡಿ ಉಪಾಧ್ಯಕ್ಷ  ಪಝಲ್ ರಹಿಮಾನ್, ಎಸ್ ಡಿ ಪಿ ಐ  ಗ್ರಾಮ ಪಂಚಾಯತ್ ಸದಸ್ಯರುಗಳಾದ ರಿಯಾಝ್ ಮದ್ದಡ್ಕ, ಶುಕುರು ಕುಪ್ಪೆಟ್ಟಿ, ಸಿದ್ದೀಕ್ ಚಾಮಾ೯ಡಿ, ಪಿಎಫ್ಐ ವೇಣೂರು ಡಿವಿಜನ್ ಅಧ್ಯಕ್ಷ  ಮುಸ್ತಫಾ ಜಿ.ಕೆರೆ ಉಪಸ್ಥಿತಿರಿದ್ದರು.

ಅಕ್ಬರ್ ಬೆಳ್ತಂಗಡಿ ಸ್ವಾಗತಿಸಿ, ನಿಸಾರ್ ಕೆರೆ ವಂದಸಿ, ನಿಝಾಮ್ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News