ಕಡಿಯಾಳಿ ಸಮಿತಿಯಿಂದ ಕಾನೂನು ಬಾಹಿರ ಗಣೇಶೋತ್ಸವ ಆಚರಣೆ

Update: 2017-08-23 17:03 GMT

ಉಡುಪಿ, ಆ.23: ಕಡಿಯಾಳಿಯ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಾಂಗಣದಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಕಾತ್ಯಾಯಿನಿ ಕಲ್ಯಾಣ ಮಂಟಪ ದಲ್ಲಿ ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಗಣೇಶ ಚತುರ್ಥಿ ಕಾರ್ಯಕ್ರಮವನ್ನು ಯಾವುದೇ ಅನುಮತಿ ಪಡೆದುಕೊಳ್ಳದೆ ಕಾನೂನು ಬಾಹಿರವಾಗಿ ನಡೆಸುತ್ತಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆರೋಪಿಸಿದೆ.

ಈ ಕುರಿತು ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಗಣೇಶೋತ್ಸವ ಸಮಿತಿಯು ಗಣೇಶ ಚತುರ್ಥಿ ಕಾರ್ಯಕ್ರಮ ನಡೆಸಲು ಅನುಮತಿ ಕೇಳಿದ್ದು, ಈಗಾಗಲೇ ಈ ಮಂಟಪದ ವಿಷಯದಲ್ಲಿ ಹಲವು ವ್ಯಾಜ್ಯಗಳು ನ್ಯಾಯಾಲಯದಲ್ಲಿರುವುದರಿಂದ ಇಲ್ಲಿ ಅನುಮತಿ ನೀಡಲು ಆಗುವುದಿಲ್ಲ. ಬೇಕಾದರೆ ದೇವಸ್ಥಾನದ ಶರ್ವಾಣಿ ಮಂಟಪದಲ್ಲಿ ಗಣಪತಿ ಇರಿಸಿ ಪೂಜೆ ಮಾಡಬಹುದು ಎಂದು ತಿಳಿಸಿದ್ದೇವೆ. ಇದನ್ನು ತಿರಸ್ಕರಿಸಿರುವ ಗಣೇಶೋತ್ಸವ ಸಮಿತಿಯವರು ಕಾರ್ಯಕ್ರಮವನ್ನು ಕಾತ್ಯಾಯಿನಿ ಕಲ್ಯಾಣ ಮಂಟಪದಲ್ಲೇ ನಡೆಸುವುದಾಗಿ ಸವಾಲು ಹಾಕಿದ್ದಾರೆ ಎಂದು ದೂರಿದರು.

ದೇವಸ್ಥಾನದ ವತಿಯಿಂದ ಗಣೇಶೋತ್ಸವ ಕಾರ್ಯಕ್ರಮಗಳನ್ನು ನಡೆಸುತ್ತಿರು ವುದರಿಂದ ಕಾತ್ಯಾಯಿನಿ ಕಲ್ಯಾಣ ಮಂಟಪದಲ್ಲಿ ಗಣೇಶೋತ್ಸವ ಸಮಿತಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಬಾರದೆಂದು ಪೊಲೀಸ್ ಇಲಾಖೆ ಮತ್ತು ನಗರ ಸಭೆಗೆ ಮನವಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪೌರಾಯುಕ್ತರು ಅನುಮತಿ ನೀಡಬೇಕಾದರೆ ದೇವಸ್ಥಾನ ಸಮಿತಿಯ ನಿರಾಕ್ಷೇಪಣಾ ಪತ್ರ ಹಾಜರು ಪಡಿಸುವಂತೆ ಗಣೇಶೋತ್ಸವ ಸಮಿತಿಗೆ ಸೂಚಿಸಿದ್ದಾರೆ. ಆದರೆ ಗಣೇಶೋತ್ಸವ ಸಮಿತಿಯವರು ಆ.20ರಂದು ಯಾವುದೇ ಅನುಮತಿ ಪಡೆ ಯದೆ ಅನಧಿಕೃತವಾಗಿ ದೇವಸ್ಥಾನದ ಪ್ರಾಂಗಣದಲ್ಲಿ ತಗಡು ಶೀಟಿನ ಚಪ್ಪರ ಹಾಕಿದ್ದಾರೆ. ಈ ಚಪ್ಪರವನ್ನು ತೆರವುಗೊಳಿಸುವಂತೆ ಮತ್ತು ಕಲ್ಯಾಣಮಂಟಪದ ಜಮೀನು ದೇವಳದ ಅನುಭೋಗದಲ್ಲಿದ್ದು, ಖಾತೆ ಕೂಡ ಹೊಂದಿರದ ಟ್ರೈಡ್ ಲೈಸನ್ಸ್ ಹೊಂದಿರದ ಅನಧಿಕೃತ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಲಾಗಿದೆ ಎಂದರು.

ಈ ರೀತಿ ಅನಧಿಕೃತ ಸ್ಥಳದಲ್ಲಿ ಕಾರ್ಯಕ್ರಮವನ್ನು ಮಾಡಲು ಹೊರಟಿರುವ ಗಣೇಶೋತ್ಸವ ಸಮಿತಿಯವರು ಈ ಕಾನೂನು ಬಾಹಿರ ಕ್ರಮವನ್ನು ಮುಚ್ಚಿಡುವ ಉದ್ದೇಶದಿಂದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವಿರುದ್ಧ ಸುಳ್ಳು ಮತ್ತು ದಾಖಲೆರಹಿತವಾದ ಆಪಾದನೆಗಳನ್ನು ಮಾಡುತ್ತಿದ್ದಾರೆ. ಗಣೇಶೋತ್ಸವ ಸಮಿತಿ ಯವರು ನಗರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಯಾವುದೇ ಪರ ವಾನಿಗೆ ಪಡೆಯದೆ ಕಾನೂನು ಉಲ್ಲಂಘನೆ ಮಾಡಿ ಗಣೇಶೋತ್ಸವ ಆಚರಣೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ದೇವಸ್ಥಾನಕ್ಕೆ ಬರುವ ಭಕ್ತರ ಸುರಕ್ಷತೆಯ ದೃಷ್ಠಿಯಿಂದ ದೇವಸ್ಥಾನದ ರಸ್ತೆಗೆ ಗೇಟು ಆಳವಡಿಸಲಾಗಿದ್ದು, ಇದರಲ್ಲಿ ಹಿಂದೂ ವಿರೋಧಿ ಚಟುವಟಿಕೆ ಇಲ್ಲ. ರಾಜಕೀಯ ಉದ್ದೇಶದಿಂದ ಈ ವಿಚಾರದಲ್ಲಿ ವಿನಾಕಾರಣ ಉಸ್ತುವಾರಿ ಸಚಿವ ರನ್ನು ಎಳೆದು ತರಲಾಗುತ್ತಿದೆ ಎಂದು ಅವರು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಸದಸ್ಯರಾದ ಕೆ.ಶ್ರೀಶ ಉಪಾಧ್ಯ, ಸಹಾನ ಎಲ್.ಭಟ್, ಆಶಾ ಶ್ರೀನಿವಾಸ್, ಸದಾಶಿವ ದೂಮಣ್ಣ ಶೆಟ್ಟಿ, ಕೆ. ಭೋಜ ಸೇರಿಗಾರ ಉಪಸ್ಥಿತರಿದ್ದರು.


ಕಡಿಯಾಳಿ ದೇವಸ್ಥಾನದ ರಸ್ತೆಯನ್ನು ಸುಮಾರು 150 ಮನೆಯವರು ಅವ ಲಂಬಿಸಿದ್ದಾರೆ. ಇದೇ ಮಾರ್ಗದಲ್ಲಿ ವಾಹನಗಳು ಕೂಡ ಹೋಗುತ್ತಿವೆ. ಈಗ ಕಾಂಗ್ರೆಸ್ ಸರಕಾರದಿಂದ ನೇಮಕಗೊಂಡ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಯವರು ಈ ಗೇಟು ಆಳವಡಿಸುವ ಕೆಲಸ ಮಾಡಿದ್ದಾರೆ. ಕೃಷ್ಣಮಠಕ್ಕೆ ಗೇಟು ಹಾಕುವಾಗ ವಿರೋಧ ಮಾಡಿದ್ದ ಕಾಂಗ್ರೆಸ್ ನಾಯಕರು ಈಗ ಕಡಿಯಾಳಿ ಸಮಿತಿಗೆ ಬುದ್ದಿ ಹೇಳಿ ಗೇಟು ತೆಗೆಸುವ ಕೆಲಸ ಮಾಡಬೇಕು. ಸಮಾಜ ವಿರೋಧಿ ನೀತಿ ಹೊಂದಿರುವ ಈ ಸಮಿತಿಯನ್ನು ಬರ್ಖಾಸ್ತುಗೊಳಿಸಬೇಕು ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿಂದು ಒತ್ತಾಯಿಸಿ ದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News