ಜಪ್ಪಿನಮೊಗರು: ರಸ್ತೆಗಳ ಕಾಂಕ್ರಿಟೀಕರಣಕ್ಕೆ ಒತ್ತಾಯಿಸಿ ಧರಣಿ

Update: 2017-08-24 12:27 GMT

ಮಂಗಳೂರು, ಆ. 24: ಜಪ್ಪಿನಮೊಗರು-ಬಜಾಲ್ ಮುಖ್ಯ ರಸ್ತೆ ಸಹಿತ ಜಪ್ಪಿನಮೊಗರು ವಾರ್ಡ್‌ನ ಎಲ್ಲ ಪ್ರಮುಖ ರಸ್ತೆಗಳಿಗೆ ಕಾಂಕ್ರಿಟೀಕರಣಗೊಳಿಸಬೇಕು ಎಂದು ಸಿಪಿಎಂ ಜಪ್ಪಿನಮೊಗರು ಶಾಖೆಗಳ ನೇತೃತ್ವದಲ್ಲಿ ಬುಧವಾರ ಸಂಜೆ 5ರಿಂದ ರಾತ್ರಿ 10ಗಂಟೆಯವರೆಗೆ ಜಪ್ಪಿನಮೊಗರು ರಸ್ತೆ ಬಳಿ ಧರಣಿ ನಡೆಸಲಾಯಿತು.

ನಾದುರಸ್ತಿಯಲ್ಲಿರುವ ರಸ್ತೆಗಳನ್ನು ಸರಿಪಡಿಸಿರಿ, ಜನ ಪ್ರತಿನಿಧಿಗಳಿಗೆ ಧಿಕ್ಕಾರ, ಕಾಂಗ್ರೆಸ್ ಬಿಜೆಪಿಗಳ ಕಟೌಟ್ ರಾಜಕೀಯಕ್ಕೆ ರಸ್ತೆಗಳನ್ನು ಬಲಿ ಕೊಡಬೇಡಿ ಇತ್ಯಾದಿ ಘೋಷಣೆಗಳನ್ನು ಕೂಗಿದರು.

  ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಅಧ್ಯಕ್ಷ ಜೆ. ಮನೋಜ್ ಶೆಟ್ಟಿ ಮಾತನಾಡಿ ಜಪ್ಪಿನಮೊಗರು-ಬಜಾಲ್ ಸಂಪರ್ಕ ರಸ್ತೆ ಕಾಂಕ್ರಿಟೀಕರಣಗೊಳ್ಳಬೇಕು ಎಂದು ಹಲವು ವರ್ಷಗಳಿಂದ ಅನೇಕ ರೀತಿಯ ಪ್ರತಿಭಟನೆ, ಹೋರಾಟ, ಮನವಿ, ಧರಣಿ ಸತ್ಯಾಗ್ರಹ ನಡೆಸಿದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮನಪಾ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿದರು.

ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಜಯಂತಿ ಬಿ. ಶೆಟ್ಟಿ, ಸಿಪಿಎಂ ಯುವ ನಾಯಕರಾದ ಸುರೇಶ್ ಬಜಾಲ್, ದಿನೇಶ್ ಶೆಟ್ಟಿ, ಸಂತೋಷ್ ಶಕ್ತಿನಗರ, ಬಿ.ಕೆ. ಇಮ್ತಿಯಾಝ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಸ್ಥಳೀಯ ಮುಖಂಡರಾದ ದಿನೇಶ್ ಅಂಚನ್, ಪವನ್ ಸುಲಾಯ ಮಾತನಾಡಿದರು.

ಧರಣಿ ಸತ್ಯಾಗ್ರಹದ ನೇತೃತ್ವವನ್ನು ಸಿಪಿಎಂ ಜಪ್ಪಿನಮೊಗರು ಶಾಖೆಯ ಮುಖಂಡ ಉದಯಚಂದ್ರ ರೈ, ಕೌಶಿಕ್ ಶೆಟ್ಟಿ, ಜಯಲಕ್ಷ್ಮೀ, ಗಿರಿಜಾ, ಹನೀಫ್, ಸಿಪಿಎಂ ಬಜಾಲ್ ವಿಭಾಗ ಸಮಿತಿಯ ಮುಖಂಡರಾದ ವರಪ್ರಸಾದ್, ರಿತೇಶ್ ಬಜಾಲ್ ಮುಂತಾದವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News