ನಾಡದೋಣಿಗಳಿಗೆ ಸೀಮೆಎಣ್ಣೆ ಪರ್ಮಿಟ್ ನವೀಕರಣ

Update: 2017-08-24 15:34 GMT

ಮಂಗಳೂರು, ಆ.24: ಮೀನುಗಾರಿಕೆ ನಾಡದೋಣಿಗಳಿಗೆ ಬಳಸುವ ಸೀಮೆಎಣ್ಣೆಯ ಪರ್ಮಿಟ್‌ನ್ನು ನವೀಕರಿಸಲು ಅರ್ಜಿ ಆಹ್ವಾನಿಸಲಾಗಿದೆ.

ದೋಣಿ ನೊಂದಣಿ ಪತ್ರದ ಪ್ರತಿ, ಆಧಾರ್‌ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರಥಮ ಪುಟದ ಪ್ರತಿ ಹಾಗೂ ಕಳೆದ ಸಾಲಿನ ಪರ್ಮಿಟ್‌ನ ಮೂಲ ಪ್ರತಿಯೊಂದಿಗೆ ಅರ್ಜಿಯನ್ನು ನಾಡದೋಣಿಗಳಿಗೆ ಸೀಮೆಎಣ್ಣೆ ವಿತರಿಸುವ ಬಂಕ್‌ನವರಿಗೆ ಆ.31ರೊಳಗೆ ಸಲ್ಲಿಸಬೇಕು. ಅಲ್ಲದೆ ಮೀನುಗಾರಿಕೆ ಇಲಾಖೆಯಿಂದ ನೀಡುವ ಪರವಾನಗಿ ನವೀಕರಿಸಲು ಅರ್ಜಿಯನ್ನು ದೋಣಿ ನೋಂದಣಿ ಪತ್ರದ ಪ್ರತಿ ಮತ್ತು 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ರೂ.100 ಪರವಾನಗಿ ಶುಲ್ಕ ಪಾವತಿಸಿ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-1) (ದೋಣಿ ಮತ್ತು ಸಲಕರಣೆ) ಸೌತ್‌ವಾರ್ಫ್, ಬಂದರು, ಮಂಗಳೂರು ಕಚೇರಿಗೆ ಸಲ್ಲಿಸಿ ಕಡ್ಡಾಯವಾಗಿ ಪರವಾನಗಿಯನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

ಪರವಾನಗಿಯನ್ನು ಪಡೆದುಕೊಳ್ಳದ ದೋಣಿಗಳಿಗೆ ಸೀಮೆಎಣ್ಣೆ ಪರ್ಮಿಟ್‌ನ್ನು ನೀಡಲಾಗುವುದಿಲ್ಲ ಎಂದು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News