ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳ ಅಭಿವೃದ್ಧಿ: ಮೇಯರ್‌

Update: 2017-08-24 15:41 GMT

ಮಂಗಳೂರು, ಆ. 24: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಉದ್ಯಾನವನಗಳ ಅಭಿವೃದ್ದಿ ಕುರಿತಂತೆ ಮಂಗಳೂರು ಪಾಲಿಕೆ ವಿಶೇಷ ಒತ್ತು ನೀಡಲಿದ್ದು, ಶೀಘ್ರದಲ್ಲಿ ಈ ಕುರಿತಂತೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ಹೇಳಿದರು.

ಮಂಗಳಾದೇವಿಯ ಮಂಗಳಾನಗರದ ಬಡಾವಣೆಯಲ್ಲಿ ಮನಪಾ ವತಿಯಿಂದ ನವೀಕರಣಗೊಳಿಸಿದ ಉದ್ಯಾನವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಅವರ ಅನುದಾನದಿಂದ ಉದ್ಯಾನವನವನ್ನು ಮಂಗಳಾನಗರದ ಬಡಾವಣೆಯಲ್ಲಿ ಸುಂದರವಾಗಿ ನವೀಕರಿಸಲಾಗಿದೆ ಎಂದರು. ನಗರದ ಸೌಂದರ್ಯ ಹೆಚ್ಚಿಸುವಲ್ಲಿ ಪಾರ್ಕ್‌ಗಳ ಪಾತ್ರ ಮುಖ್ಯವಾಗಿದೆ. ಪಾರ್ಕ್ ಹಾಗೂ ಸರ್ಕಲ್ ಅಭಿವೃದ್ದಿ ನಿಟ್ಟಿನಲ್ಲಿ ವಿಶೇಷ ಯೋಚನೆಗಳನ್ನು ಹೊಂದಿದ್ದು, ಹಂತ ಹಂತವಾಗಿ ಇದು ಜಾರಿಗೊಳ್ಳಲಿದೆ ಎಂದು ಮೇಯರ್ ಹೇಳಿದರು.

ಮನಪಾ ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ, ಮನಪಾ ಪ್ರತಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು, ನಗರ ಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ರವೂಫ್, ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News