ಬಕ್ರೀದ್: ರಕ್ಷಣೆಗೆ ಮನವಿ

Update: 2017-08-24 15:49 GMT

ಮಂಗಳೂರು, ಆ. 24: ಮುಸ್ಲಿಮರು ಸೆ.1ರಂದು ಆಚರಿಸುತ್ತಿರುವ ಬಕ್ರೀದ್ ಹಬ್ಬಕ್ಕೆ ಪ್ರಾಣಿ ಬಲಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರಾಣಿ ಬಲಿ ನೀಡಿದ ಮಾಂಸ ಸಾಗಾಟಕ್ಕೆ ತೊಂದರೆಯಾಗದಂತೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಶ್ಚಿಮ ವಲಯ ಐಜಿಪಿಗೆ ಮನವಿ ಸಲ್ಲಿಸಿದೆ.

ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳ ಸಾವಿಗೆ ಸಂಬಂಧಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸಂಸ್ಥೆಯ ಗೌರವವನ್ನು ಕಾಪಾಡಬೇಕು. ಅಲ್ಲದೆ, ಕೆಲವು ವರ್ಷಗಳ ಹಿಂದೆ ಪಂಜಿಮೊಗರಿನ ತಾಯಿ ಮತ್ತು ಮಗುವಿನ ಹತ್ಯೆ ಪ್ರಕರಣದ ಆರೋಪಿಗಳ ಬಂಧನ ಈವರೆಗೂ ಆಗಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ನಿಯೋಗದಲ್ಲಿ ದ.ಕ. ಜಿಲ್ಲಾ ಲೀಗ್‌ನ ಅಧ್ಯಕ್ಷ ಸಿ.ಅಹ್ಮದ್ ಜಮಾಲ್, ಕಾರ್ಯದರ್ಶಿ ಎಂ.ಬಶೀರ್ ಉಳ್ಳಾಲ, ಬೆಂಗರೆ ವಲಯ ಲೀಗ್ ಅಧ್ಯಕ್ಷ ಎಂ.ಕೆ.ಅಶ್ರಫ್, ಕಾರ್ಯದರ್ಶಿ ಅಲ್ತಾಫ್, ಲೀಗ್ ಸದಸ್ಯರಾದ ಹಾಜಿ ಮುಹಮ್ಮದ್ ಬಿ.ಎ., ಹಾಜಿ ಇಬ್ರಾಹೀಂ ಬೆಂಗರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News