ಈ ಮಾರುಕಟ್ಟೆಯಲ್ಲಿ ಸಿಗದ ಹೂವುಗಳೇ ಇಲ್ಲ!

Update: 2017-08-24 17:16 GMT

ಮಂಗಳೂರು, ಆ.24: ನಗರದ ಹೂವಿನ ಮಾರುಕಟ್ಟೆ (ಫ್ಲವರ್ ಮಾರ್ಕೆಟ್) ಎಂದೇ ಖ್ಯಾತಿ ಪಡೆದಿರುವ, ನಗರದ ಪುರಾತನ ಮಾರುಕಟ್ಟೆಗಳಲ್ಲಿ ಒಂದಾಗಿರುವ ಕಾರ್‌ಸ್ಟ್ರೀಟ್ ಮಾರುಕಟ್ಟೆ ಸುದೀರ್ಘ ಇತಿಹಾಸವನ್ನು ಹೊಂದಿದೆ.

ಸ್ವಾತಂತ್ರ್ಯ ಪೂರ್ವದ ಅಂದರೆ 1942ರಿಂದ ನಗರದ ರಥಬೀದಿ (ಕಾರ್‌ಸ್ಟ್ರೀಟ್)ಯಲ್ಲಿ ಕಾರ್ಯಾಚರಿಸುತ್ತಿರುವ ಈ ಮಾರುಕಟ್ಟೆಯಲ್ಲಿ ನಗರದ ಯಾವುದೇ ಮೂಲೆಯಲ್ಲಿ ಸಿಗದ ಹೂವುಗಳು ಇಲ್ಲಿ ಸಿಗುತ್ತವೆ ಎಂಬುದು ಗ್ರಾಹಕರ ಅಭಿಪ್ರಾಯ. ಅದಕ್ಕಾಗಿ ನಗರದ ಮೂಲೆ ಮೂಲೆಗಳಿಂದಲೂ ಜನರು ಗುಣಮಟ್ಟದ ಹೂವು ಹಾಗೂ ಅಪರೂಪದ ಹೂವುಗಳಿಗಾಗಿ ಈ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ 75 ವರ್ಷಗಳ ರಜತ ಮಹೋತ್ಸವ ಸಂಭ್ರಮದಲ್ಲಿರುವ ಈ ಮಾರುಕಟ್ಟೆ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಕ್ಕೊಳಪಟ್ಟಿದ್ದು, ಇಲ್ಲಿ ಸುಮಾರು 20 ಮಂದಿ ವ್ಯಾಪಾರಿಗಳು ಹೂವು ಹಾಗೂ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News