ಕಾಸರಗೋಡು: ಗಣೇಶ ಚತುರ್ಥಿಯ ಸಂಭ್ರಮ

Update: 2017-08-25 09:00 GMT

ಕಾಸರಗೋಡು, ಆ. 25: ಕಾಸರಗೋಡಿನಾದ್ಯಂತ ಇಂದು ಗಣೇಶ ಚತುರ್ಥಿಯ ಸಂಭ್ರಮ. ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರದಲ್ಲಿ ಚತುರ್ಥಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ, ಮುಳ್ಳೇರಿಯ, ಬದಿಯಡ್ಕ, ಬೆಳ್ಳೂರು, ಕುಂಬಳೆ, ಪ್ರತಾಪನಗರ, ಉಪ್ಪಳ, ಮಂಜೇಶ್ವರ, ಮುಳಿಂಜ ಶಿವ ತೀರ್ಥಪದವು, ವರ್ಕಾಡಿ  ಸುಂಕದಕಟ್ಟೆ, ದೈಗೋಳಿ, ವರ್ಕಾಡಿ ಪಾವಳ, ಮೀಯಪದವು ಮದಂಗಲು, ಬಾಡೂರು, ಅಡ್ಯನಡ್ಕ, ಅಡ್ಕಸ್ಥಳ, ಪೆರ್ಲ, ಸೀತಾಂಗೋಳಿ, ಬಾವಲಿಗುಳಿ, ಬಾಯಾರು, ಪೈವಳಿಕೆ ಚಿತ್ತಾರಿ, ಪುತ್ತಿಗೆ, ಕುಂಟಾರು, ಪುಂಡೂರು, ಎಡನೀರು, ಜೋಡುಕಲ್ಲು, ಧರ್ಮತ್ತಡ್ಕ, ಅಡೂರು  ಮೊದಲಾದೆಡೆ ಸಂಭ್ರಮದ  ಶ್ರೀ ಗಣೇಶೋತ್ಸವ ನಡೆಯುತ್ತಿದೆ.

ಇದಲ್ಲದೆ ಜಿಲ್ಲೆಯ ಇತರೆಡೆಗಳಲ್ಲೂ ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಕೆಲವೆಡೆ ಇಂದು ಸಂಜೆ ಜಲಸ್ತಂಭನಾ ಶೋಭಾಯಾತ್ರೆ ನಡೆದರೆ ಇನ್ನೂ ಕೆಲವೆಡೆ 3,5,9 ದಿನ ಪೂಜಿಸಿ ಬಳಿಕ ಜಲಸ್ತಂಭನೆ ನಡೆಸಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News