‘ಶೋಧ – 2017’ ಅಂತರ್ ಕಾಲೇಜ್ ಸ್ಪರ್ಧೆಯ ಉದ್ಘಾಟನೆ

Update: 2017-08-25 15:15 GMT

ದೇರಳಕಟ್ಟೆ,ಆ.25: ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಸಯನ್ಸ್ ಕಾಲೇಜಿನ ವತಿಯಿಂದ ನಡೆದ ‘ಶೋಧ 2017’ ಅಂತರ್ ಕಾಲೇಜ್ ಸ್ಪರ್ಧೆಯ ಉದ್ಘಾಟನೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಪ್ರೊ. ಅಬ್ದುಲ್ ರೆಹಮಾನ್‍ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ತೋರಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಹಾಜಿ ಯು.ಕೆ.ಮೋನುರವರು ವಹಿಸಿದ್ದು ಸ್ಪರ್ಧಾತ್ಮಕ ಸಮಾಜದಲ್ಲಿ ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿ ಮುಂದೆ ಬರಬೇಕು ಎಂದು ಮಾರ್ಗದರ್ಶನ ನೀಡಿದರು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಇಕ್ಬಾಲ್ ಅಹಮದ್ ಯು.ಟಿ.ರವರು ಸ್ವಾಗತಿಸಿದರು.

ಕಾರ್ಯಕ್ರಮದ ಸಂಯೋಜಕರಾದ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಯುತ ಅವಿನಾಶ್ ಎಸ್.ಎಂ., ಶ್ರೀಮತಿ ಆ್ಯಂಜಲಿನ್ ಸುಪ್ರಿಯಾ ಲೋಬೋ, ಕಣಚೂರು ಸಂಸ್ಥೆಯ ವಿವಿಧ ವಿಭಾಗದ ಪ್ರಾಂಶುಪಾಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿಯಾದ ಮುಬೀನ್ ತಾಜ್ ಕಾರ್ಯಕ್ರಮ ನಿರೂಪಿಸಿದರು, ಉಪನ್ಯಾಸಕಿ ಶ್ರೀಮತಿ. ಆ್ಯಂಜಲಿನ್ ಸುಪ್ರಿಯಾ ಲೋಬೋ ವಂದಿಸಿದರು.

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ. ಹೇಮಲತಾ, ಕಣಚೂರು ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲರಾದ ವಿನೀತಾ ಮಥಾಯಸ್, ಪ್ರಿಸ್ಕೂಲ್‍ನ ಲಿನೇಟ್ ಡಿ.ಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News