ಪುಂಜಾಲಕಟ್ಟೆಯಲ್ಲಿ ಬೃಹತ್ 'ಮಾನವ ಸರಪಳಿ' ಕಾರ್ಯಕ್ರಮ

Update: 2017-08-26 14:59 GMT

ಪುಂಜಾಲಕಟ್ಟೆ, ಆ. 25:  ಎಸ್.ಡಿ.ಪಿ.ಐ. ವತಿಯಿಂದ ಭಾರತದಾಧ್ಯಂತ ನಡೆಸಿಕೊಂಡು ಬಂದ 'ಮನೆಯಿಂದ ಹೊರಗೆ ಬನ್ನಿ' ಜನತೆಯ ಅಭಿಯಾನದ ಪ್ರಯುಕ್ತ  ಮಂಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ ಬದ್ರಿಯಾ ಜುಮಾ ಮಸೀದಿ ಬಳಿ ಬೃಹತ್ 'ಮಾನವ ಸರಪಳಿ' ಶುಕ್ರವಾರ ಜುಮಾ ನಮಾಝ್ ಬಳಿಕ ಹಲವಾರು ಭಾಗವಹಿಸುವ ಮೂಲಕ ಭಾರತದಲ್ಲಿ ನಡೆಯುವ ಗುಂಪು ಹತ್ಯೆಯನ್ನು ಪ್ರತಿರೋಧಿಸಲು ನಾವು ಸನ್ನದ್ಧರು ಎಂದು ಸಾರಿದರು.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ. ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಲ್ಫಾನ್ಸ್ ಫ್ರಾಂಕೋ ಪ್ರಸ್ತಾವಿಕವಾಗಿ ಮಾತನಾಡಿ, ಭಾರತದಲ್ಲಿ ನಡೆಯುವ ಗುಂಪು ಹತ್ಯೆಯನ್ನು ಎದುರಿಸಲು ಭಾರತದಲ್ಲಿರುವ ದಲಿತ ಅಲ್ಪಸಂಖ್ಯಾತರೆಲ್ಲ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ಎಸ್.ಡಿ.ಪಿ.ಐ. ಇಂತಹ ಅಭಿಯಾನದ ಮೂಲಕ ಯಶಸ್ವಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಎಸ್.ಡಿ.ಪಿ.ಐ. ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ನವಾಝ್ ಪ್ರತಿರೋಧವು ಅಪರಾಧವಲ್ಲ, ಆತ್ಮ ರಕ್ಷಣೆಗಾಗಿ ಪ್ರತಿರೋಧ ಮಾಡಲು ಭಾರತದ ಸಂವಿಧಾನದಲ್ಲಿ ಅವಕಾಶವಿದೆ ಆದ್ದರಿಂದ ಪ್ರತಿರೋಧದ ಮೂಲಕ ಸಂಘ ಪರಿವಾರದ ಗೂಂಡಾಗಳಿಗೆ ಅರ್ಥವಾಗುವ ರೀತಿಯಲ್ಲಿ ಪ್ರತಿಕೃಯಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ. ಮಡಂತ್ಯಾರ್ ವಲಯ ಅಧ್ಯಕ್ಷ  ರಿಯಾಝ್ ಪುಂಜಾಕಟ್ಟೆ, ಬೆಳ್ತಂಗಡಿ ವಿಧಾನ ಸಭಾ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ ಹಾಗು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News