ಗುಂಪು ಹಿಂಸಾ ಹತ್ಯೆಯ ವಿರುದ್ಧ ಮಾನವ ಸರಪಳಿ

Update: 2017-08-27 10:34 GMT

ಮಂಗಳೂರು, ಆ.27: ಗೋ ರಕ್ಷಣೆ ಹೆಸರಲ್ಲಿ ದೇಶಾದ್ಯಂತ ಮುಸ್ಲಿಮರ, ದಲಿತರ ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ ‘ಮನೆಯಿಂದ ಹೊರಬನ್ನಿ’ ಎಂಬ ಘೋಷಣೆಯೊಂದಿಗೆ ಶುಕ್ರವಾರ ದೇಶದ ಹಲವೆಡೆ ಏಕಕಾಲಕ್ಕೆ ಮಾನವ ಸರಪಳಿ ಕಾರ್ಯಕ್ರಮ ನಡೆ ಯಿತು. ಅದರಂತೆ ದ.ಕ. ಜಿಲ್ಲೆಯಲ್ಲೂ ಮಾನವ ಸರಪಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.
ಜಿಲ್ಲಾದ್ಯಂತ ಪ್ರಮುಖ ಮಸೀದಿಗಳ ಮುಂಭಾಗದಲ್ಲಿ, ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಪಟ್ಟಣ, ನಗರ ಪ್ರದೇಶಗಳು ಸೇರಿದಂತೆ 43 ಕಡೆಗಳಲ್ಲಿ ಸಾರ್ವಜನಿಕರು ಒಟ್ಟಾಗಿ ಮಾನವ ಸರಪಳಿ ರಚಿಸುವ ಮೂಲಕ ಗುಂಪು ಹಿಂಸೆಯ ವಿರುದ್ಧ ಐಕ್ಯಮತವನ್ನು ಪ್ರದರ್ಶಿಸಿದರು.

20 ನಿಮಿಷಗಳ ಕಾಲ ನಡೆದ ಮಾನವ ಸರಪಳಿಯ ಮೂಲಕ ಮಾನವೀಯತೆಗಾಗಿ ಒಂದಾಗೋಣ, ಭಾರತ ಲಿಂಚಿಸ್ತಾನ ಆಗುವುದನ್ನು ತಡೆಯೋಣ, ಗುಂಪು ಹತ್ಯೆಯನ್ನು ಕೊನೆಗೊಳಿಸೋಣ, ನ್ಯಾಯಾಲಯಗಳ ಕಣ್ಣು ತೆರೆಸೋಣ, ಗೋ ರಾಜಕೀಯ ತಡೆಯೋಣ ಮತ್ತು ಕಾನೂನು ಪಾಲಕರ ಕರ್ತವ್ಯವನ್ನು ನೆನಪಿಸೋಣ ಎಂಬಿತ್ಯಾದಿ ಭಿತ್ತಿಪತ್ರಗಳನ್ನು ಹಿಡಿದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News