ಗಿರಿಜನ ಉತ್ಸವಕ್ಕೆ ಕಲಾವಿದರಿಂದ ಅರ್ಜಿ ಅಹ್ವಾನ

Update: 2017-08-27 13:42 GMT

ಮಂಗಳೂರು, ಆ. 27: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಗಿರಿಜನ ಉಪಯೋಜನೆಯಡಿ ಗಿರಿಜನ ಉತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ, ನಾಟಕ, ಶಾಸ್ತ್ರೀಯ, ನೃತ್ಯ, ಜಾನಪದ ಪ್ರದರ್ಶನ ಕಲಾ ತಂಡಗಳು, ದಾಸರ ಪದಗಳು, ತತ್ವಪದ, ಗೀಗಿಪದ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ಥಾನಿ ವಾದ್ಯ ಸಂಗೀತ, ಹಾಡುಗಾರಿಕೆ, ಕರ್ನಾಟಕ ವಾದ್ಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪರಿಶಿಷ್ಟ ಪಂಗಡ ವಿಭಾಗದ ಕಲಾವಿದರಿಗೆ ಮಾತ್ರ ಈ ಉತ್ಸವದಲ್ಲಿ ಕಲಾಪ್ರದರ್ಶನ ನೀಡಲು ಅವಕಾಶವಿದೆ.

   ಪರಿಶಿಷ್ಟ ಪಂಗಡದ ಆಸಕ್ತ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರದೊಂದಿಗೆ ಹಿಂದೆ ಕಾರ್ಯಕ್ರಮ ನೀಡಿದ ದಾಖಲೆಗಳೊಂದಿಗೆ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಳು ಭವನ, ಉರ್ವಸ್ಟೋರ್ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು-575006, ದೂ: 0824-2451527, ಇವರಿಗೆ ಆ. 31ರ ಒಳಗೆ ಕಳುಹಿಸಿಕೊಡಲು ಕನ್ನಡ ಮತ್ತು ಸಂಸ್ಕೃತಿ ಇಲಾಯ ಸಹಾಯಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News