ಕರ್ಣಾಟಕ ಬ್ಯಾಂಕ್ ಉಡುಪಿ ಕುಂಜಿಬೆಟ್ಟು ಶಾಖೆ ಉದ್ಘಾಟನೆ

Update: 2017-08-28 12:01 GMT

ಉಡುಪಿ,ಆ.28: ಉಡುಪಿ- ಮಣಿಪಾಲ ರಸ್ತೆಯ ಕುಂಜಿಬೆಟ್ಟುವಿನ ಎ.ವಿ.ಆರ್ಕೇಡ್ ಕಟ್ಟಡಕ್ಕೆ ಸ್ಥಳಾಂತರಗೊಂಡ ಕರ್ಣಾಟಕ ಬ್ಯಾಂಕಿನ ಉಡುಪಿ ಕುಂಜಿಬೆಟ್ಟು ಶಾಖೆಯನ್ನು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೋಮವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನ ಕ್ರಾಂತಿಯಲ್ಲಿ ಕರ್ಣಾ ಟಕ ಬ್ಯಾಂಕ್ ಮಹತ್ತರ ಹೆಜ್ಜೆಯನ್ನು ಇಡುತ್ತಿದೆ. ಈ ಬ್ಯಾಂಕ್ ಮಳೆನೀರು ಕೊಯ್ಲು ಹಾಗೂ ಸೋಲಾರ್ ದೀಪ ಅಳವಡಿಕೆಗೆ ಸಾಲ ನೀಡುತ್ತಿರುವುದು ಸ್ವಾಗತಾರ್ಹ. ಜನತೆ ಈ ಸೌಲಭ್ಯವನ್ನು ಬಳಸಿಕೊಂಡು ಬೇಸಿಗೆಯಲ್ಲಿನ ನೀರಿನ ಸಮಸ್ಯೆ ಪರಿಹರಿಸಬೇಕು ಮತ್ತು ವಿದ್ಯುತ್ ಉಳಿತಾಯ ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯಕಾರ್ಯ ರ್ವಹಣಾಧಿಕಾರಿ ಮಹಾಬಲೇಶ್ವರ ರಾವ್ ಮಾತನಾಡಿ, ಕರ್ಣಾಟಕ ಬ್ಯಾಂಕ್ ದೇಶದಲ್ಲಿ 771 ಶಾಖೆಗಳು, 1400 ಎಟಿಎಂಗಳನ್ನು ಹೊಂದಿವೆ. ಪ್ರಸ್ತುತ ಬ್ಯಾಂಕಿನ ಗ್ರಾಹಕರ ಸಂಖ್ಯೆ 82ಲಕ್ಷ. ಕರ್ಣಾಟಕ ಬ್ಯಾಂಕ್‌ನ್ನು ಬೃಹತ್ ಆರ್ಥಿಕ ಸಂಸ್ಥೆಯನ್ನಾಗಿ ಬೆಳೆಸುವ ನಿಟ್ಟಿನಲ್ಲಿ ‘ಕೆಬಿಎಲ್ ವಿಶನ್ 20-20’ ಯೋಜನೆ ಹಮ್ಮಿಕೊಂಡಿದ್ದು, ಇದರ ಪ್ರಕಾರ 2020ರಲ್ಲಿ ಬ್ಯಾಂಕಿನ ಗ್ರಾಹಕರ ಸಂಖ್ಯೆ ಯನ್ನು 1.30 ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ. ಇದರಿಂದ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟು ಮಂದಿ ಕರ್ಣಾಟಕ ಬ್ಯಾಂಕಿನ ಗ್ರಾಹಕರು ಇರುತ್ತಾರೆ. ಈ ನಿಟ್ಟಿನಲ್ಲಿ ಗ್ರಾಹಕ ರನ್ನು ಸೇರಿಸುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅದೇ ರೀತಿ ವ್ಯವಹಾರವನ್ನು ವೃದ್ಧಿಸುವ ಗುರಿಯನ್ನು ಹೊಂದಲಾಗಿದ್ದು, ಸದ್ಯ 95ಸಾವಿರ ಕೋಟಿ ರೂ. ವ್ಯವಹಾರವನ್ನು 2020ಕ್ಕೆ ದ್ವಿಗುಣ ಅಂದರೆ 1.80 ಸಾವಿರ ಕೋಟಿ ರೂ.ಗೆ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಭಾರತದಲ್ಲಿ ಎಲ್ಲ ಬ್ಯಾಂಕಿನ ಎನ್‌ಪಿಎ ಶೇ.10 ಇದ್ದರೆ, ಕರ್ಣಾಟಕ ಬ್ಯಾಂಕಿನ ಎನ್‌ಪಿಎ ಶೇ.4ಕ್ಕಿಂತಲೂ ಕಡಿಮೆ ಇದೆ. ಇದು ಕರ್ಣಾಟಕ ಬ್ಯಾಂಕ್ ಆರ್ಥಿಕವಾಗಿ ಬಲಿಷ್ಠವಾಗಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಮುಂದೆ ಇದನ್ನು ಇನ್ನಷ್ಟು ಕಡಿಮೆ ಮಾಡುವ ಯೋಜನೆ ಇದೆ ಎಂದು ಅವರು ತಿಳಿಸಿದರು.

ನೂತನ ಇ-ಲಾಬಿಯನ್ನು ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ.ಜಿ.ಶಂಕರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರನ್ನು ಗೌರವಿಸಲಾಯಿತು. ಬ್ಯಾಂಕಿನ ಮಾಜಿ ಅಧ್ಯಕ್ಷ ಯು.ವಿ.ರಾವ್, ಮಾಜಿ ನಿರ್ದೇಶಕ ಎ.ಜಿ.ಕೊಡ್ಗಿ ಉಪಸ್ಥಿತರಿ ದ್ದರು. ಉಡುಪಿ ವಲಯದ ಸಹಾಯಕ ಮಹಾಪ್ರಬಂಧಕಿ ವಿದ್ಯಾಲಕ್ಷ್ಮಿ ಆರ್. ಸ್ವಾಗತಿಸಿದರು. ಮುಖ್ಯ ಪ್ರಬಂಧಕ ರಮೇಶ್ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News