ಫಲಾಹ್ ಶಾಲೆಯಲ್ಲಿ ಪ್ರತಿಭಾ ಕಾರಂಜಿ, ಕಲೋತ್ಸವ

Update: 2017-08-28 14:41 GMT

ಮಂಗಳೂರು, ಆ. 28: ಸಾರ್ವಜನಿಕ ಶಿಕ್ಷಣ ಇಲಾಖೆ, ಕೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ದಕ್ಷಿಣ ವಲಯ ಮತ್ತು ವಿದ್ಯಾನಗರ ತಲಪಾಡಿ ಫಲಾಹ್ ಆಂಗ್ಲ ಮಾಧ್ಯಮ ಪ್ರೌಢಶಾ ಇವುಗಳ ಜಂಟಿ ಆಶ್ರಯದಲ್ಲಿ ಉಳ್ಳಾಲ ಬಿ ಹೋಬಳಿ ಮಟ್ಟದ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ - 2017 ಕಾರ್ಯಕ್ರಮವು ಇತ್ತೀಚೆಗೆ ಫಲಾಹ್ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಲಾಹ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿತ ಅಧ್ಯಕ್ಷ ಹಾಜಿ. ಯು. ಬಿ. ಮುಹಮ್ಮದ್ ವಹಿಸಿದ್ದರು. ಉದ್ಘಾಟನೆಯನ್ನು ಸಲಹೆಗಾರ ಹಾಗೂ ಸಂಸ್ಥೆಯ ಸದಸ್ಯ ಅಬ್ಬಾಸ್ ಉಚ್ಚಿಲ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹಿಲ್ಡಾ ಕ್ಲೇಮನ್ಸಿಯ ಪಿಂಟೋ, ಮಂಗಳೂರು ಶಿಕ್ಷಣ ವಲಯದ ಶಿಕ್ಷಣ ಸಂಯೋಜಕ ಫ್ರಾನ್ಸಿಸ್ ಮಿನೇಜಸ್ ಹರೇಕಳ ಪಾವೂರು ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್, ಪ್ರೌಢಶಾಲಾ ಶಿಕ್ಷಕ ಸಂಘದ ಪದಾಧಿಕಾರಿ ರಾಧಾಕೃಷ್ಣ ಪಿಲಾರ್ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಹಾಜಿ ಅರಬಿಕುಂಞಿ, ಕಾರ್ಯದರ್ಶಿಯವರಾದ ಟಿ.ಎಂ.ಬಶೀರ್, ಕೋಶಾಧಿಕಾರಿಯವರಾದ ಹಾಜಿ ಇಸ್ಮಾಯೀಲ್ ನಾಗತೋಟ, ಪ್ರಾಂಶುಪಾಲರಾದ ಅಬ್ದುಲ್ ಖಾದರ್ ಹುಸೈನ್, ಸಭಾಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೊಣಾಜೆ ಪದವು, ದೇರಳಕಟ್ಟೆ, ಮನ್ನೂರು, ತಲಪಾಡಿ ವಲಯಗಳ ಒಟ್ಟು 20 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಯ ಮುಹಮ್ಮದ್ ರಫೀಕ್.ಕೆ ಸ್ವಾಗತಿಸಿ, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಯ ಆಯಿಶ ಸಬೀನ ಕೈಸೀರನ್ ವಂದಿಸಿದರು. ಶಿಕ್ಷಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News