ಅಲ್ ಫುರ್ಖಾನ್ ಮೂಡುಬಿದಿರೆ ತಂಡಕ್ಕೆ ಕರಾಟೆಯಲ್ಲಿ ಸಮಗ್ರ ಪ್ರಶಸ್ತಿ

Update: 2017-08-30 13:26 GMT

ಮೂಡುಬಿದಿರೆ, ಆ. 30: ಶೋರಿನ್ ಕರಾಟೆ ಅಸೋಸಿಯೇಷನ್ ಹಾಗೂ ಮಹಾವೀರ ಕಾಲೇಜು ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ನಡೆದ 15 ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು 37 ವಿಧ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ 9 ಚಿನ್ನ, 11 ಬೆಳ್ಳಿ ಹಾಗೂ 7 ಕಂಚಿನ ಪದಕ ವೈಯುಕ್ತಿಕ ಪ್ರಶಸ್ತಿಯೊಂದಿಗೆ ಉತ್ತಮ ಪ್ರೋತ್ಸಾಹಕ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.

ವಿಜೇತರನ್ನು ಸಂಸ್ಥೆಯ ಚೇಯರ್ ಮ್ಯಾನ್  ಮೊಯ್ದಿನ್ ಕುಂಞಿ, ನಿರ್ದೇಶಕಿ ಮುಮ್ತಾಝ್ ಪ್ರಾಂಶುಪಾಲೆ ನಝ್ರಾನ ಅಭಿನಂದಿಸಿದರು. ನದೀಮ್ ಮತ್ತು ಸರ್ಫಾಝ್ ತರಬೇತುದಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News