ಉಳ್ಳಾಲ ಸೈಯದ್ ಮದನಿ ಮೊಹಲ್ಲಾ ಒಕ್ಕೂಟ ಅಸ್ತಿತ್ವಕ್ಕೆ

Update: 2017-08-30 18:29 GMT

ಉಳ್ಳಾಲ, ಆ. 30: ಇತಿಹಾಸ ಪ್ರಸಿದ್ಧ ಖುತುಬುಝ್ಝಮಾನ್ ಹಝ್ರತ್ ಅಸೈಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ) ದರ್ಗಾ ಮತ್ತು ಕೇಂದ್ರ ಜುಮಾ ಮಸೀದಿ ಉಳ್ಳಾಲ ಇದರ ಜಮಾಅತ್ ವ್ಯಾಪ್ತಗೊಳಪಟ್ಟ 29 ಮೊಹಲ್ಲಾಗಳನ್ನು ಸಂಘಟಿಸಿ ಸೈಯದ್ ಮದನಿ ಮೊಹಲ್ಲಾ ಒಕ್ಕೂಟವು ಮಂಚಿಲ ದಾರುಲ್ ಬದ್ರ್‌ನಲ್ಲಿ ಅಸ್ಸೆಯ್ಯಿದ್ ಜಲಾಲ್ ತಂಙಳ್ ಅಳೇಕಲ ಇವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತರಲಾಯಿತು.

ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಅವರ ನಿರ್ದೇಶನದಲ್ಲಿ ಈ ಸಂಸ್ಥೆಯು ಮುಂದುವರಿಯಲಿದ್ದು, ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷರಾಗಿದ್ದ, ಹಾಲಿ ಅಳೇಕಲ ಜಮಾಅತ್ ಅಧ್ಯಕ್ಷರಾಗಿರುವ ಯು.ಎಸ್. ಹಂಝ ಹಾಜಿ ಗೌರವ ಅಧ್ಯಕ್ಷರಾಗಿ, ಪ್ರಖ್ಯಾತ ಧಾರ್ಮಿಕ ವಿದ್ವಾಂಸರೂ ಅಳೇಕಲ ಮೊಹಲ್ಲಾ ಮದ್ರಸ ಸಂಚಾಲಕರಾಗಿರುವ ಪಿ.ಎಸ್. ಶಿಹಾಬುದ್ದೀನ್ ಸಖಾಫಿ ಅಲ್-ಕಾಮಿಲ್ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಮಂಚಿಲ ಮಸೀದಿ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ ಹಮೀದ್ ಮಂಚಿಲ, ಕೋಶಾಧಿಕಾರಿಯಾಗಿ ದರ್ಗಾ ಆಡಳಿತ ಸಮಿತಿ ಸದಸ್ಯ ಮೊಹಮ್ಮದ್ ತೊಕ್ಕೊಟ್ಟು, ಉಪಾಧ್ಯಕ್ಷರುಗಳಾಗಿ ಮದನಿ ನಗರ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯ ಹನೀಫ್ ಮದನಿ ನಗರ, ಮುಕ್ಕಚ್ಚೇರಿ ಮಸೀದಿ ಜೊತೆ ಕಾರ್ಯದರ್ಶಿ ಅಸ್ಗರ್ ಮುಕ್ಕಚ್ಚೇರಿ, ಕಾರ್ಯದರ್ಶಿಗಳಾಗಿ ಅಬೂಸಾಲಿ ಹಳೆಕೋಟೆ ಮತ್ತು ಸುಂದರ್ ಭಾಗ್ ಮಸೀದಿ ಪ್ರಧಾನ ಕಾರ್ಯದರ್ಶಿ ಹಂಝ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ದರ್ಗಾ ಆಡಳಿತ ಸಮಿತಿ ಸದಸ್ಯರಾದ ಶರೀಫ್ ಅಳೇಕಲ, ಹನೀಫ್ ಮಾರ್ಗತಲೆ, ಫಾರೂಕ್ ಮಾರ್ಗತಲೆ, ಅಬ್ದುಲ್ ಖಾದರ್ ಕೋಡಿ ಮಾಜಿ ಸದಸ್ಯರಾದ ಮಕ್ಸೂದ್ ಮಂಚಿಲ, ಸೈಯದ್ ಝಿಯಾದ್ ತಂಙಳ್ ಅಳೇಕಲ, ರೌಫ್ ಹಾಜಿ ಅಳೇಕಲ ಮತ್ತು ಯು.ಡಿ. ಹಸನ್ ಅಳೇಕಳ, ಸದ್ದಾಂ ಮೇಲಂಗಡಿ, ಮುಸ್ತಫಾ ಮೇಲಂಗಡಿ, ರಹ್ಮಾನ್ ಅಕ್ಕರೆಕೆರೆ, ಅಬ್ದುಲ್ ಖಾದರ್ ಜೀಲಾನಿ ಮತ್ತು 29 ಮೊಹಲ್ಲಾಗಳ ಉಸ್ತುವಾರಿಗಳಾಗಿ ಮುಸ್ತಫಾ ಮುಕ್ಕಚ್ಚೇರಿ, ಸೀದಿಯಾಕ ಸುಂದರ್ ಭಾಗ್, ತಾಸೀನ್ ತೋಟ, ಯು.ಡಿ. ಅಶ್ರಫ್ ಅಳೇಕಳ, ಸಯೀದ್ ಮಂಚಿಲ, ಅಬ್ದುಲ್ ಖಾದರ್ ಮಾರ್ಗತಲೆ, ಮುಸ್ತಫಾ ಸೇವಂತಿಗುಡ್ಡೆ, ಹಾಶಿರ್ ಮದನಿ ನಗರ, ಮನ್ಸೂರ್ ದಾರಂದಬಾಗಿಲು, ಸೌಕತ್ ಪಟ್ಲ, ರಫೀಕ್ ಅಝಾದ್ ನಗರ, ನಝ್ರತ್ ಪಿಲಾರ್, ಅಶ್ರಫ್ ಹಳೆಕೋಟೆ, ಅಝೀರ್ ಕೋಡಿ, ಹನೀಫ್ ಬೊಟ್ಟು, ಕಲೀಲ್ ಉಳ್ಳಾಲ ಬೈಲು, ಇಕ್ಬಾಲ್ ಒಂಭತ್ತುಕೆರೆ, ಹನೀಫ್ ಹೈದರ್ ಅಲಿ ನಗರ, ಮೊಹಮ್ಮದ್ ಕ್ಯಕೋ, ಹನೀಫ್ ಖಿಲ್ರಿಯಾ ನಗರ, ಇಸಾಕ್ ಪೇಟೆ, ಅಲ್ತಾಫ್ ಕುಂಪಲ, ರೌಫ್ ಕಲ್ಲಾಪು, ರಶೀದ್ ಚೊಂಬುಗುಡ್ಡೆ, ಮುಝಮ್ಮಿಲ್ ಕೊಟೇಪುರ, ಸತ್ತಾರ್ ಮೇಲಂಗಡಿ, ಬಶೀರ್ ಸಖಾಫಿ, ರಹ್ಮಾನ್ ಅಕ್ಕರೆಕೆರೆ, ಅಮೀರ್ ಹಿದಾಯತ್ ನಗರ, ರಫೀಕ್ ಮಿಲ್ಲತ್ ನಗರ ಇವರುಗಳನ್ನು ಆಯ್ಕೆಮಾಡಲಾಯಿತು.

ಯು.ಡಿ. ಬದ್ರುದ್ದೀನ್ ಹಾಜಿ ಪ್ರಾಸ್ತಾವಿಕ ಮಾತನಾಡಿದರು. ಅಬ್ದುಲ್ ಹಮೀದ್ ಮಂಚಿಲ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News