ಪುತ್ತೂರು: ಬಕ್ರೀದ್ ಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ

Update: 2017-09-01 15:00 GMT

ಪುತ್ತೂರು, ಸೆ.1: ತಾಲೂಕಿನ ಕೆದಿಲ ಬೀಟಿಗೆಯ ದುಲ್ಫಿಕರ್ ಯಂಗ್ ಮೆನ್ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ  ಶುಕ್ರವಾರ ಪುತ್ತೂರು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಲಾಯಿತು. 

ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಯು.ಟಿ ಹಸನ್ ಹಾಜಿ ಅವರು ರೋಗಿಗಳಿಗೆ ಹಣ್ಣುಹಂಪಲು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಈ ವೇಳೆ  ದುಲ್ಫಿಕರ್ ಯಂಗ್ ಮೆನ್ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಬೀಟಿಗೆ ಮಾತನಾಡಿ, ಪ್ರತೀ ವರ್ಷ ಬಕ್ರೀದ್ ಹಬ್ಬದಲ್ಲಿ ತಮ್ಮ ಸಂಸ್ಥೆಯ ವತಿಯಿಂದ ಪುತ್ತೂರು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡುತ್ತಿದ್ದು, ಇದರೊಂದಿಗೆ ಸಂಸ್ಥೆಯ ವತಿಯಿಂದ ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವು ನೀಡುತ್ತಿದ್ದೇವೆ. ಇದೊಂದು ಮಾನವೀಯತೆ ಕಾರ್ಯ ಎನ್ನುವ ಹಿನ್ನೆಲೆಯಲ್ಲಿ ನಿರಂತರವಾಗಿ ಈ ಕೆಲಸವನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದರು.

ಈ ಸಂರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೀಣಾ, ದುಲ್ಫಿಕರ್ ಯಂಗ್‍ಮೆನ್ಸ್‍ನ ಅಧ್ಯಕ್ಷ ಗಫೂರ್ ಬೀಟಿಗೆ,  ಸದಸ್ಯರಾದ ಅಶ್ರಫ್, ಕರೀಂ, ಜಾಬೀರ್, ನೌಫತ್, ಶಿಯಾಬ್ , ಸಫ್‍ವಾನ್ ಮತ್ತಿತರರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News