ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆ

Update: 2017-09-04 16:34 GMT

ಉಡುಪಿ, ಸೆ.4: ಇಂದ್ರಾಳಿ ರೈಲ್ವೆ ಸೇತುವೆ ಬಳಿ ಸುಮಾರು 65ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಮೃತದೇಹವು ಇಂದು ಬೆಳಗಿನ ಜಾವ 7ಗಂಟೆ ಸುಮಾರಿಗೆ ಪತ್ತೆಯಾಗಿದೆ.

ವ್ಯಕ್ತಿಯು ರೈಲು ಹಳಿಯ ಸನಿಹದಿಂದ ನಡೆದುಕೊಂಡು ಹೋಗುತ್ತಿರುವಾಗ ರೈಲು ಬಡಿದು ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಸಾವಿಗೆ ನಿಖರವಾದ ಕಾರಣ ಇನ್ನು ಲಭ್ಯವಾಗಲಿಲ್ಲ. 5.8 ಅಡಿ ಎತ್ತರ ಸಾಧಾರಣ ಮೈಕಟ್ಟು, ಬಿಳಿ ಮಿಶ್ರಿತ ಕಪ್ಪು ಕೂದಲು, ಬಿಳಿ ಗಡ್ಡ ಹೊಂದಿರುವ ಮೃತ ವ್ಯಕ್ತಿ, ಅರ್ಧ ಕೈ ತೋಳಿನ ಶರ್ಟು, ನೀಲಿ ಬಣ್ಣದ ಒಳ ಉಡುಪು, ಬರ್ಮುಡ ಚಡ್ಡಿ ಧರಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News