ಗೌರಿ ಲಂಕೇಶ್ ವಿಚಾರಧಾರೆಯನ್ನು ಎದುರಿಸಲಾಗದ ಹೇಡಿಗಳ ಕೃತ್ಯ: ನ್ಯಾಶನಲ್ ವಿಮೆನ್ಸ್ ಫ್ರಂಟ್

Update: 2017-09-06 11:01 GMT

ಮಂಗಳೂರು, ಸೆ.6: ಖ್ಯಾತ ಪತ್ರಕರ್ತೆ ಮತ್ತು ಪ್ರಗತಿಪರ ಚಿಂತಕಿ ಗೌರಿ ಲಂಕೇಶ್’ರವರ ಹತ್ಯೆ, ಅವರ ವಿಚಾರಧಾರೆಗಳನ್ನು ನೇರವಾಗಿ ಎದುರಿಸಲಾಗದ ಹೇಡಿಗಳ ಕೃತ್ಯವಾಗಿದೆ ಎಂದು ನ್ಯಾಶನಲ್ ವಿಮೆನ್ಸ್ ಫ್ರಂಟ್ ಘಟನೆಯನ್ನು ಖಂಡಿಸಿದೆ.

ಸರದಿಯಲ್ಲಿ ವಿಚಾರವಾದಿಗಳನ್ನು ಈ ರೀತಿ ಕೊಲ್ಲುತ್ತಿರುವ ಘಟನೆಗಳು ನಿಜಕ್ಕೂ ಆಘಾತಕಾರಿಯಾಗಿದೆ. ಹಂತಕರು ಓರ್ವ ಮಹಿಳಾ ವಿಚಾರವಾದಿಯನ್ನು ಹತ್ಯೆಗೈಯ್ಯುವಷ್ಟರ ನೀಚ ಮಟ್ಟಿಗೆ ಇಳಿಯುತ್ತಾರೆಂದಾದರೆ ಅವರ ಬೌದ್ಧಿಕ ದಿವಾಳಿತನ ಯಾವ ಮಟ್ಟದಲ್ಲಿದೆಯೆಂದು ಯೋಚಿಸಬೇಕಾಗಿದೆ. ಗೌರಿ ಪತ್ರಕರ್ತೆ ಮಾತ್ರವಲ್ಲ, ರಾಜ್ಯದ ಮುಂಚೂಣಿಯಲ್ಲಿದ್ದ ಓರ್ವ ಮಹಿಳಾ ಹೋರಾಟಗಾರ್ತಿ ಕೂಡಾ ಆಗಿದ್ದರು. ವಿಕೃತ ಮನಸ್ಸಿನ ಹಂತಕರು ಗೌರಿಯವರ ಹತ್ಯೆಯ ಮೂಲಕ ಇತರೆ ಹೋರಾಟಗಾರರನ್ನು ಬೆದರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಅವರಿಗೆ ಗೌರಿಯವರನ್ನು ಕೊಲ್ಲಬಹುದೇ ವಿನಹ ಅವರ ವಿಚಾರಧಾರೆಗಳನ್ನಲ್ಲವೆನ್ನುವ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು.
 ಆರೋಪಿಗಳು ಎಷ್ಟೇ ಪ್ರಬಲರಾಗಿದ್ದರೂ ಕೂಡಾ ಅವರನ್ನು ಆದಷ್ಟು ಶೀಘ್ರವಾಗಿ ಬಂಧಿಸಬೇಕಾಗಿದೆ ಮತ್ತು ಹತ್ಯೆಯ ಹಿನ್ನೆಲೆಯಲ್ಲಿರುವ ಎಲ್ಲಾ ಸಂಚುಕೋರರನ್ನೂ ಬಂಧಿಸಬೇಕೆಂದು ನ್ಯಾಶನಲ್ ವಿಮೆನ್ಸ್ ಫ್ರಂಟ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News