ಕಾಲೇಜು ಮೈದಾನದಲ್ಲಿ ಸ್ಪೋಟಕ ವಸ್ತು ಪತ್ತೆ

Update: 2017-09-06 16:33 GMT

ಶಂಕರನಾರಾಯಣ, ಸೆ.6: ಹಿಲಿಯಾಣ ಗ್ರಾಮದ ಗೋಳಿಯಂಗಡಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಸೆ.5ರಂದು ಸಂಜೆ ವೇಳೆ ವಸತಿ ನಿಲಯದ ವಿದ್ಯಾರ್ಥಿಗಳು ಆಟ ಆಡುತ್ತಿದ್ದು, ಈ ವೇಳೆ ವಿದ್ಯಾರ್ಥಿಗಳು ಬ್ಯಾಟಿನಿಂದ ಹೊಡೆದ ಸ್ಪೋಟಕ ವಸ್ತುವೊಂದು ಸಿಡಿದ ಘಟನೆ ನಡೆದಿದೆ.

 ಯಾರೋ ಅಪರಿಚಿತ ವ್ಯಕ್ತಿಗಳು ಕಾಡು ಪ್ರಾಣಿಗಳನ್ನು ಬೇಟೆಯಾಡುವ ಉದ್ಧೇಶದಿಂದ ಕಾಡು ಪರಿಸರದಲ್ಲಿರುವ ಶಾಲಾ ಆವರಣದ ಮರೆಯಲ್ಲಿ ಸ್ಪೋಟಕ ವಸ್ತುವನ್ನು ಇಟ್ಟಿದ್ದರು. ಇದನ್ನು ಅರಿಯದ ವಿದ್ಯಾರ್ಥಿಗಳು ಈ ವಸ್ತು ವಿನಲ್ಲಿ ಆಟ ಆಡುತ್ತಿದ್ದಾಗ ಸ್ಪೋಟ ಸಿಡಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News