ಗೌರಿ ಲಂಕೇಶ್‌ಗೆ ಮಹಿಳಾ ಕಾಂಗ್ರೆಸ್ ಶೃದ್ಧಾಂಜಲಿ

Update: 2017-09-07 16:31 GMT

ಉಡುಪಿ, ಸೆ.7: ಜೀವನದುದ್ದಕ್ಕೂ ಅಭಿವೃಕ್ತ ಸ್ವಾತಂತ್ರ ಹಾಗೂ ಮಾನವ ಹಕ್ಕುಗಳಿಗಾಗಿ ಹೋರಾಡಿದ ಗೌರಿ ಲಂಕೇಶ್ ಅವರು ಅದೇ ಕಾರಣಗಳಿಗಾಗಿ ಹಂತಕರ ಗುಂಡಿಗೆ ಬಲಿಯಾಗಿರುವುದು ಅತ್ಯಂತ ದು:ಖದ ಘಟನೆಯಾಗಿದೆ. ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ದೇವರು ನೀಡಲಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಬೆಂಗಳೂರಿನಲ್ಲಿ ಹತ್ಯೆಗೊಳಗಾದ ಖ್ಯಾತ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಅವರಿಗೆ ಶೃದ್ದಾಂಜಲಿ ಅರ್ಪಿಸಲು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾಂಗ್ರೆಸ್ ಮುಖಂಡರಾದ ನಾಗೇಶ್ ಕುಮಾರ್ ಉದ್ಯಾವರ ಅವರು ಗೌರಿ ಲಂಕೇಶ್ ಅವರ ಹೋರಾಟದ ಬದುಕಿನ ಕ್ಷಣಗಳನ್ನು ವಿವರಿಸಿ, ಅವರ ಹತ್ಯೆ ಇಡೀ ನಾಡಿನ ಜನತೆಯ ಆಂತರ್ಯವನ್ನು ತಟ್ಟಿದ ಬಗೆಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್‌ನ ನಾಯಕಿಯರಾದ ಜ್ಯೋತಿ ಹೆಬ್ಬಾರ್, ಡಾ.ಸುನೀತಾ ಶೆಟ್ಟಿ, ರೋಶನಿ ಒಲಿವೆರಾ, ಚಂದ್ರಿಕಾ ಶೆಟ್ಟಿ, ಸರಳಾ ಕಾಂಚನ್, ಸರಸು ಡಿ.ಬಂಗೇರ, ಮಮತಾ ಶೆಟ್ಟಿ, ಸುಲೋಚನಾ ಬಂಗೇರ, ಸಲಿನಾ ಕರ್ಕಡ, ಸಂಧ್ಯಾ ತಿಲಕರಾಜ್, ರಮೇಶ್ ಕಾಂಚನ್, ನರಸಿಂಹ ಮೂರ್ತಿ, ಕುಶಲ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News