ಸೆ.9: ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ವತಿಯಿಂದ 'ಲೀಡ್ 8 ಕ್ಯಾಂಪ್'

Update: 2017-09-08 09:07 GMT

ಬಂಟ್ವಾಳ, ಸೆ. 8: ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ಡಿವಿಷನ್‌ನ 8 ಪದಾಧಿಕಾರಿಗಳಿಗೆ ಡು ಮಿಯಾ-ಮಿಯಾ ಲೀಡ್ 8 ಕ್ಯಾಂಪ್ ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನರವರ ಅಧ್ಯಕ್ಷತೆಯಲ್ಲಿ ಸೆ. 9ರಂದು ಸಂಜೆ 6 ಗಂಟೆಗೆ ಅಲ್-ಮುನವ್ವರ ಕ್ಯಾಂಪಸ್ ಮೂಡಡ್ಕದಲ್ಲಿ ನಡೆಯಲಿದೆ.

ಮೂಡಡ್ಕ ಮುದರ್ರಿಸ್‌ ಸ್ವಲಾಹುದ್ದೀನ್ ಸಖಾಫಿ ಉದ್ಘಾಟಿಸುವರು. ಕಾರ್ಯಕ್ರದಲ್ಲಿ ರಫೀಕ್ ಸಅದಿ ದೇಲಂಬಾಡಿ ತರಗತಿಯನ್ನು ನಡೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್, ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಉಪಾಧ್ಯಕ್ಷರುಗಳಾದ ಶರೀಫ್ ಸಅದಿ ಕಿಲ್ಲೂರು, ಸೆರ್ಕಳ ಸಖಾಫಿ, ಕೆ.ಎಂ.ಎಚ್ ಝುಹ್ರಿ ಕೊಂಬಾಳಿ, ಕಾರ್ಯದರ್ಶಿಗಳಾದ ಶರೀಫ್ ನಂದಾವರ, ಮಹಮ್ಮದಲಿ ತುರ್ಕಳಿಕೆ, ಸಲೀಂ ಹಾಜಿ ಬೈರಿಕಟ್ಟೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News