ಹಜ್ ಯಾತ್ರಿಕರ ಮತ್ತೆ ಎರಡು ತಂಡ ಮಂಗಳೂರಿಗೆ ಆಗಮನ

Update: 2017-09-08 12:56 GMT

ಮಂಗಳೂರು, ಸೆ. 8: ಕೇಂದ್ರ ಹಜ್ ಕಮಿಟಿ ಮೂಲಕ ರಾಜ್ಯದಿಂದ ಹಜ್ ಯಾತ್ರೆ ಕೈಗೊಂಡ ಯಾತ್ರಿಕರ ಪೈಕಿ ಶುಕ್ರವಾರ ಮತ್ತೆ ಎರಡು ತಂಡಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ. ಇದರೊಂದಿಗೆ ನಾಲ್ಕು ತಂಡಗಳು ಮಂಗಳೂರಿಗೆ ಆಗಮಿಸಿದಂತಾಗಿದೆ.

ಹಜ್ ಯಾತ್ರಿಕರನ್ನು ಹೊತ್ತ ಮೂರನೆ ತಂಡ ಬೆಳಗ್ಗೆ 8:15ಕ್ಕೆ ಏರ್ ಇಂಡಿಯಾ ವಿಮಾನದ ಮೂಲಕ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ನಾಲ್ಕನೆ ತಂಡ ಬೆಳಗ್ಗೆ 9:48ಕ್ಕೆ ತಲುಪಿದೆ. ಮೂರನೆ ತಂಡದಲ್ಲಿ 158 ಮತ್ತು ನಾಲ್ಕನೆ ತಂಡದಲ್ಲಿ 156 ಹಜ್ಜಾಜಿಗಳಿದ್ದರು. ಇದರೊಂದಿಗೆ ಕಳೆದ ಎರಡು ದಿನದಲ್ಲಿ 4 ತಂಡದಲ್ಲಿ 630 ಹಜ್ಜಾಜಿಗಳು ಮಂಗಳೂರು ತಲುಪಿದಂತಾಗಿದೆ. ಕೊನೆಯ ತಂಡ ಶನಿವಾರ ಆಗಮಿಸಲಿದೆ.

ಈ ಸಂದರ್ಭ ಶಾಸಕ ಮೊಯ್ದಿನ್ ಬಾವ, ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್, ಸಿ. ಮಹ್ಮೂದ್ ಹಾಜಿ, ರಾಜ್ಯ ಹಜ್ ಸಮಿತಿಯ ಅಧಿಕಾರಿಗಳಾದ ಫೈರೋಝ್ ಬಾಷಾ, ಮುನೀರ್ ಪಾಶ, ವಕ್ಫ್ ಅಧಿಕಾರಿ ಅಬೂಬಕರ್ ಹಾಜಿ, ಅಹ್ಮದ್ ಬಾವಾ ಪಡೀಲ್, ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ರಫೀಕ್ ಹಾಜಿ, ಸುಲೈಮಾನ್ ಕರಾಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News