ಮಹಿಳೆ ಆತ್ಮಹತ್ಯೆ

Update: 2017-09-08 18:24 GMT

ಮಂಗಳೂರು, ಸೆ. 8: ಜೀವನದಲ್ಲಿ ಮಾನಸಿಕವಾಗಿ ನೊಂದ ಮಹಿಳೆಯೊಬ್ಬರು ಮನೆಯಲ್ಲಿ  ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಶಕ್ತಿನಗರದಲ್ಲಿ ನಡೆದಿದೆ.

ನಗರದ ಬಿಲ್ಡರ್ ರೊಬ್ಬರ ಪುತ್ರಿ ರೇಶ್ಮಾ (50) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಇವರ 50ನೇ ವರ್ಷದ ಹುಟ್ಟುಹಬ್ಬ ಇತ್ತೀಚೆಗಷ್ಟೇ  ಆಚರಿಸಲಾಗಿತ್ತು. ಪತಿ ಅಮೆರಿಕಾದಲ್ಲಿದ್ದು 4 ವರ್ಷದ ಹಿಂದೆ ಇವರ ಮಧ್ಯೆ ವಿಚ್ಛೇದನವಾಗಿತ್ತು. ಆ ಬಳಿಕ 19 ವರ್ಷದ ಮಗಳು ಕೂಡಾ ತಂದೆಯ ಜತೆ ಅಮೇರಿಕಾದಲ್ಲೇ ವಾಸಿಸುತ್ತಿದ್ದಾಳೆ. ಇದರಿಂದ ಮನನೊಂದ ಮಹಿಳೆ ಶುಕ್ರವಾರ  ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News