ವಾರ್ತಾಭಾರತಿ ವರದಿಗಾರನ ಬಂಧನ: ಯುನಿವೆಫ್ ಖಂಡನೆ

Update: 2017-09-09 04:28 GMT

ಮಂಗಳೂರು, ಸೆ.9: ಮಾಧ್ಯಮವು ಪ್ರಜಾಪ್ರಭುತ್ವದ ಒಂದು ಅವಿಭಾಜ್ಯ ಅಂಗ. ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯಗಳು ದಮನಿಸಲ್ಪಟ್ಟಾಗ ಅದೊಂದು ನಿರಂಕುಶ ಪ್ರಭುತ್ವವಾಗಿ ಮಾರ್ಪಡುವ ಅಪಾಯ ತಪ್ಪಿದ್ದಲ್ಲ. ವಾರ್ತಾಭಾರತಿ ತನ್ನ ವಸ್ತುನಿಷ್ಟ ಹಾಗೂ ನಿಖರ ವರದಿಗಳಿಂದಾಗಿ ಕೆಲವೊಮ್ಮೆ ಕೋಮುವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದುಂಟು. ಆದರೆ ರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆಯೇ ಕೋಮುವಾದಿಗಳ ಏಜೆಂಟರಂತೆ ವರ್ತಿಸಿ ವಾರ್ತಾಭಾರತಿ ವರದಿಗಾರನನ್ನು ಮುನ್ಸೂಚನೆಯಿಲ್ಲದೆ ಬಂಧಿಸಿರುವುದು ಖಂಡನೀಯ. ದಕ್ಷ ಸರಕಾರವೆಂಬ ಹೆಗ್ಗಳಿಕೆ ಇರುವ ಪ್ರಸ್ತುತ ರಾಜ್ಯ ಸರಕಾರ ಒಂದು ಕಡೆ ಕೋಮುವಾದಿಗಳ ದಮನಕ್ಕೆ ಪ್ರಯತ್ನಿಸಿರುವುದು ಶ್ಲಾಘನೀಯವಾಗಿದ್ದರೆ ಇನ್ನೊಂದು ಕಡೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲೆತ್ನಿಸುವುದು ಖಂಡನೀಯ. 
ಆದಷ್ಟು ಶೀಘ್ರ ವರದಿಗಾರನ ಬಿಡುಗಡೆಯಾಗಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಯುನಿವೆಫ್ ಕರ್ನಾಟಕ ಪ್ರಕಟನೆಯಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News