ಪುತ್ತೂರು ರೈಲು ನಿಲ್ದಾಣಕ್ಕೆ ರೈಲ್ವೆ ಪೊಲೀಸರ ದಾಳಿ

Update: 2017-09-09 14:58 GMT

ಪುತ್ತೂರು,ಸೆ.9: ಜಾಗಿಂಗ್, ವಾಕಿಂಗ್ ಇನ್ನಿತರ ಕಾರಣಗಳಲ್ಲಿ ಟಿಕೇಟು ಪಡೆಯದೆ ರೈಲ್ವೆ ನಿಲ್ದಾಣದೊಳಗೆ ಪ್ರವೇಶಿಸಿದ ವ್ಯಕ್ತಿಗಳ ವಿರುದ್ದ ರೈಲ್ವೇ ಪೊಲೀಸರು ದಾಳಿ ನಡೆಸಿ ಕೇಸು ದಾಖಲಿಸಿದ್ದಾರೆ. 

ಸಕಲೇಶಪುರ ರೈಲ್ವೇ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಕಬಕ ರೈಲು ನಿಲ್ದಾಣಕ್ಕೆ ಸಕಲೇಶಪುರ ರೈಲ್ವೇ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿ ಕಾನೂನು ಉಲ್ಲಂಘನೆ ನಡೆಸಿದ ಸಾರ್ವಜನಿಕರಿಗೆ ದಂಡ ವಿದಿಸಿದ್ದಾರೆ.

ನಿಯಮ ಬಾಹಿರವಾಗಿ ರೈಲು ನಿಲ್ದಾಣದಲ್ಲಿ ಅಡ್ಡಾಡುತ್ತಿರುವವರನ್ನು ದಸ್ತಗಿರಿ ಮಾಡಿ ಕೆಲವರನ್ನು ಕೋರ್ಟಿಗೆ ಹಾಜರು ಪಡಿಸಿ ದಂಡ ವಿಧಿಸಲಾಗಿದೆ. ಪ್ಲಾಟ್ ಪಾರಂನಲ್ಲಿ ಫೊಟೋ ಕ್ಲಿಕ್ಕಿಸುತ್ತಿದ್ದ ಐವರು ಕಾಲೇಜು ಯುವಕರನ್ನು ಪತ್ತೆ ಹಚ್ಚಿ ಅಪ್ರಾಪ್ತರಾದ ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಮುನ್ನೆಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಪ್ಲಾಟ್ ಪಾರಂನಲ್ಲಿ ಟಿಕೇಟು ರಹಿತವಾಗಿ ಅಡ್ಡಾಡುತ್ತಿದ್ದವರಿಗೆ ದಂಡ ವಿದಿಸಿದ್ದಲ್ಲದೇ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ಪಾರ್ಕ್ ಮಾಡಿದ ಎರಡು ಬೈಕ್, ಒಂದು ಸ್ಕೂಟರ್ ಹಾಗೂ ಒಂದು ಕಾರಿನ ವಾರಿಸುದಾರರನ್ನು ಕೋರ್ಟಿಗೆ ಹಾಜರು ಪಡಿಸಿ ಒಟ್ಟು ಎರಡು ಸಾವಿರ ರೂಪಾಯಿ ದಂಡ ವಿದಿಸಲಾಯಿತು ಹಾಗೂ ಕಾನೂನಿನ ವಾಗ್ದಂಡನೆ ಮುನ್ನೆಚ್ಚರಿಕೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News