ಗಾಂಧಿಯನ್ನು ಕೊಂದ ಸಂತತಿಯೇ ಗೌರಿಯನ್ನು ಹತ್ಯೆಗೈದಿದೆ: ಪ್ರೊ.ಹಯವದನ

Update: 2017-09-09 15:55 GMT

ಕುಂದಾಪುರ, ಸೆ.9: ದೇಶದಲ್ಲಿ ಇಂದು ಗೋಡ್ಸೆ ಸಂತತಿಗಳು ಜಾಸ್ತಿಯಾಗು ತ್ತಿವೆ. ಗಾಂಧಿ ಕಲಿಸಿದ ಭಾರತ ನಮಗೆ ಬೇಕು. ಇದಕ್ಕಾಗಿ ಹೋರಾಟ ಮಾಡ ಬೇಕಾಗಿದೆ. ಗಾಂಧೀಜಿಯನ್ನು ಕೊಂದ ಸಂತತಿಯೇ ಇಂದು ಗೌರಿ ಲಂಕೇಶ್ ರನ್ನು ಹತ್ಯೆ ಗೈದಿದೆ ಎಂದು ಉಪನ್ಯಾಸಕ ಪ್ರೊ.ಹಯವದನ್ ಮೂಡಸಗ್ರಿ ಆರೋಪಿಸಿದ್ದಾರೆ.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸಮು ದಾಯ ಕುಂದಾಪುರ ಇವುಗಳ ವತಿಯಿಂದ ಶುಕ್ರವಾರ ಸಂಜೆ ಕುಂದಾಪುರ ತಾಪಂ ಮುಂಭಾಗದಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪತ್ರಕರ್ತ ರಾಮಕೃಷ್ಣ ಹೇರ್ಳೆ ಮಾತನಾಡಿ, ಮಾನವೀಯ ಸಹಬಾಳ್ವೆ, ಶಾಂತಿಗಾಗಿ ಹೋರಾಡುತ್ತಿದ್ದ ಓರ್ವ ಸಾಮಾನ್ಯ ಮಹಿಳೆಯನ್ನು ಕದ್ದುಮುಚ್ಚಿ ಗುಂಡಿಕ್ಕಿ ಕೊಲೆ ಮಾಡಿರುವುದು ಅವರಲ್ಲಿನ ಭಂಡತನಕ್ಕೆ ಉದಾಹರಣೆ. ಒಬ್ಬರನ್ನು ಕೊಲ್ಲುವುದರಿಂದ ಅವರ ವಿಚಾರಗಳು, ಚಿಂತನೆಗಳು ಸಾಯುವುದಿಲ್ಲ ಎಂದು ಹೇಳಿದರು.

ಪ್ರಗತಿ ಪರ ಚಿಂತಕ ಶಶಿಧರ ಹೆಮ್ಮಾಡಿ ಮಾತನಾಡಿ, ಇಂದು ಕೆಲವು ಮಾಧ್ಯಮಗಳು ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯ ಹಾದಿ ತಪ್ಪಿಸುವ ರೀತಿಯಲ್ಲಿ ವರ್ತಿಸುತ್ತಿರುವುದು ಖೇದಕರ. ಸೋಷಿಯಲ್ ಮೀಡಿಯಾದಲ್ಲಿ ರುವ ಜನರಿಗೆ ಗೌರಿಯವರ ಅಂತಃಕರಣ ತಿಳಿದಿಲ್ಲ. ಗೌರಿಯೊಳಗಿನ ಮಾನವೀ ಯತೆ ಅವರಿಗೆ ಗೊತ್ತಿಲ್ಲ ಎಂದು ಟೀಕಿಸಿದರು.

ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ, ಹಿರಿಯ ಪತ್ರಕರ್ತ ಎಎಸ್‌ಎನ್ ಹೆಬ್ಬಾರ್, ಅಭಿಲಾಷ, ಸಮುದಾಯದ ಉದಯ ಗಾಂವ್ಕರ್, ನಗರ ಕಾಂಗ್ರೆಸ್ ಮುಂದಾಳು ವಿನೋದ ಕ್ರಾಸ್ತ, ಕವಿ ಸಚಿನ್ ಅಂಕೋಲಾ ಮಾತನಾಡಿದರು. ಮೊಂಬತ್ತಿ ಬೆಳಗಿ ಗೌರಿ ಲಂಕೇಶ್‌ಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಪತ್ರಕರ್ತರ ಸಂಘದ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಪತ್ರಕರ್ತ ರಾದ ಮಝರ್, ಜಾನ್ ಡಿಸೋಜ, ಉದಯ ಆಚಾರ್, ಐಶ್ವರ್ಯ ಬೀಜಾಡಿ, ರಾಘವೇಂದ್ರ ಬಳ್ಕೂರು, ಸುನೀಲ್ ಬೈಂದೂರು, ಸಮುದಾಯದ ಜಿ.ವಿ ಕಾರಂತ, ಸದಾನಂದ ಬೈಂದೂರು, ಸಂದೇಶ ಕುಂದಾಪುರ, ಶಂಕರ್ ಆನಗಳ್ಳಿ ಡಿವೈಎಫ್‌ಐನ ಸುರೇಶ ಕಲ್ಲಾಗರ, ರಾಜಾ ಬಿಟಿಆರ್, ಗಣೇಶ ಕಲ್ಲಾ ಗರ ಸ್ಟಾರ್ ಫ್ರೆಂಡ್ಸ್‌ನ ಗಣೇಶ್ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News