ಶಿರಿಯಾರ ಗ್ರಾಪಂಗೆ ಚುನಾವಣೆ ಘೋಷಣೆ

Update: 2017-09-11 17:16 GMT

ಉಡುಪಿ, ಸೆ.11: ತಾಲೂಕಿನ ಶಿರಿಯಾರ ಗ್ರಾಪಂನ 13 ಸ್ಥಾನಗಳಿಗೆ ಉಪ ಚುನಾವಣೆಯ ಘೋಷಣೆಯಾಗಿದ್ದು, ಚುನಾಣೆ ಸೆ. 24ರ ರವಿವಾರ ನಡೆಯಲಿದೆ.  ಸೆ.11ರಿಂದ ನಾಮಪತ್ರಗಳ ಸ್ವೀಕಾರ ಪ್ರಾರಂಭಗೊಂಡಿದ್ದು, ಸೆ.14 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 15ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಸೆ.18 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಸೆ.24ರಂದು ಚುನಾವಣೆ ನಡೆಯಲಿದ್ದು, 27ರಂದು ಮತ ಎಣಿಕೆ ತಾಲೂಕು ಕೇಂದ್ರದಲ್ಲಿ ನಡೆಯಲಿದೆ.

ಉಪ ಚುನಾವಣೆ ನಡೆಯುವ ಶಿರಿಯಾರ ಗ್ರಾಪಂ ವ್ಯಾಪ್ತಿಯಲ್ಲಿ ಸೆ.11ರಿಂದ 27ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News