ಲೈಂಗಿಕ ಕಾರ್ಯಕರ್ತೆ/ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಗೆ ಪುನರ್ವಸತಿ ಸೌಲಭ್ಯ

Update: 2017-09-11 17:18 GMT

ಉಡುಪಿ, ಸೆ.11: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ 2017-18ನೇ ಸಾಲಿನ ‘ಚೇತನ ಯೋಜನೆ’ಯಡಿ ಲೈಂಗಿಕ ಕಾರ್ಯಕರ್ತೆಯರು/ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಿ ಅವರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗುವಂತೆ ವ್ಯಾಪಾರ, ಟೈಲರಿಂಗ್, ಹೈನುಗಾರಿಕೆ, ಮೀನು ವ್ಯಾಪಾರ, ಸಿದ್ದಉಡುಪು ತಯಾರಿಕೆ, ಮಲ್ಲಿಗೆ ಕೃಷಿ, ಇತ್ಯಾದಿ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆ ಗೊಳಿಸಲು ನೇರವಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ರೂ. 25,000 ಸಾಲ ಹಾಗೂ 25,000 ರೂ.ಸಹಾಯಧನ ನೀಡಲಾಗುವುದು.

ಅರ್ಹತೆಗಳು: ಅರ್ಜಿದಾರರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು. ಜಿಲ್ಲೆಯಲ್ಲಿ ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿಗಾಗಿ ಹಾಗೂ ಸರಕಾರ ದಿಂದ ಅಧಿಕೃತವಾಗಿ ಗುರುತಿಸಲಾಗಿರುವ ಸಂಸ್ಥೆಯಿಂದ ಅಧಿಕೃತ ದೃಢೀಕರಣ ಪತ್ರ ಸಲ್ಲಿಸಬೇಕು. ಅರ್ಜಿಯಲ್ಲಿ ಅಧಿಕೃತ ನಿವಾಸದ ವಿಳಾಸ/ ಮತದಾರರ ಗುರುತಿನ ಚೀಟಿ/ ಆಧಾರ್ ಕಾರ್ಡ್/ ಪಡಿತರ ಚೀಟಿ ಯಾವುದಾದರೂ ಒಂದು ದಾಖಲೆ ಪ್ರತಿ ಸಲ್ಲಿಸಬೇಕು. ಬ್ಯಾಂಕ್‌ನಲ್ಲಿ ಕಡ್ಡಾಯವಾಗಿ ಖಾತೆಯನ್ನು ಹೊಂದಿರಬೇಕು.

ಅರ್ಜಿಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ‘ಬಿ’ ಬ್ಲಾಕ್, ಮೊದಲನೇ ಮಹಡಿ, ರಜತಾದ್ರಿ, ಮಣಿಪಾಲ ಇಲ್ಲಿಂದ ಪಡೆಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820- 2574972ನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಸೆ.16 ಕೊನೆಯ ದಿನ ವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News