ಕ್ರೈಸ್ತ ಧರ್ಮದ ಬಗ್ಗೆ ಅವಹೇಳನಕಾರಿ ಸಂದೇಶ: ಕ್ರಮಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್‌ನಿಂದ ಮನವಿ

Update: 2017-09-12 14:30 GMT

ಮಂಗಳೂರು, ಸೆ. 12: ಸಾಮಾಜಿಕ ಜಾಲತಾಣದಲ್ಲಿ ಕ್ರೈಸ್ತ ಧರ್ಮದ ಬಗ್ಗೆ ಅವಹೇಳನಕಾರಿಯಲ್ಲಿ ಸಂದೇಶ ಹಾಕಿದ್ದ ಯುವಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಕ್ರೈಸ್ತ ಮುಖಂಡರು ಮಂಗಳವಾರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಅಕ್ಷರ್ ಬೊಳಿಯಮಜಲು ಎಂಬಾತ ಫೇಸ್‌ಬುಕ್ ಖಾತೆಯಲ್ಲಿ ಏಸು ಕ್ರಿಸ್ತ ಹಾಗೂ ಮದರ್ ತೆರೆಸಾ ಅವರ ವಿರುದ್ಧ ಕೆಟ್ಟ ಭಾಷೆಯಲ್ಲಿ ಬರಹ ಪ್ರಕಟಿಸಿ, ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕೆಡಿಸುವ ನಿಟ್ಟಿನಲ್ಲಿ ಯತ್ನಿಸಿದ್ದಾನೆ. ಈತನ ಸಂದೇಶದಿಂದ ಕ್ರೈಸ್ತ ಸಮುದಾಯದ ಭಾವನೆಗೆ ನೋವುಂಟಾಗಿದೆ. ಆರೋಪಿಯನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಖಂಡರಾದ ಮೆರಿಲ್ ರೇಗೊ, ಪ್ರವೀಣ್‌ಚಂದ್ರ ಆಳ್ವ, ಶೆಲ್ಡನ್ ಕ್ರಾಸ್ತಾ, ರೋಹಣ್ ಕುಲಶೇಖರ, ಗಿರೀಶ್ ಆಳ್ವಾ, ಸಂದೇಶ್ ಮೊದಲಾದವರು ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News