ಯುವಕರು ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಬೇಕು:ಜಯರಾಮ ಭಟ್

Update: 2017-09-12 15:41 GMT

ಉಡುಪಿ, ಸೆ.12: ಇತ್ತೀಚಿನ ದಿನಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಹಿರಿಯರು ಮಾತ್ರ ಸಕ್ರಿಯರಾಗಿರುವುದು ಕಂಡುಬರುತ್ತಿದೆ. ನಮ್ಮ ಮಕ್ಕಳು ಮತ್ತು ಯುವ ಜನಾಂಗ ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಚಟುವಟಿಕೆಗಳಿಂದ ದೂರವೇ ಉಳಿಯುತ್ತಿವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಕ್ರಿಯಾಶೀಲ ರಾಗಬೇಕು. ಹಾಗಾದಾಗ ಮಾತ್ರ ಸಂಘಟನೆ ಹೆಚ್ಚು ಬಲಯುತಗೊಳ್ಳುವುದು ಹಾಗೂ ಯುವಕರ ವ್ಯಕ್ತಿತ್ವ ವಿಕಸನವೂ, ಸರ್ವಾಂಗೀಣ ಅಭಿವೃದ್ಧಿಯೂ ಸಾಧ್ಯ ಎಂದು ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಪಿ. ಜಯರಾಮ ಭಟ್ ಹೇಳಿದ್ದಾರೆ.

ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ರವಿವಾರ ನಡೆದ ಕೂಟ ಮಹಾಜಗತ್ತಿನ ಕೇಂದ್ರೀಯ ಮಹಾಧಿವೇಶನವನ್ನು ಉ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ರವಿವಾರ ನಡೆದ ಕೂಟ ಮಹಾಜಗತ್ತಿನ ಕೇಂದ್ರೀಯ ಮಹಾಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದೆಲ್ಲೆಡೆ ಹಾಗೂ ವಿಶ್ವದೆಲ್ಲೆಡೆ ಲಕ್ಷಾಂತರ ಸಂಖ್ಯೆಯಲ್ಲಿ ಕೂಟಬಂಧು ಗಳಿದ್ದಾರೆ. ಎಷ್ಟೋ ಸಂದರ್ಗಳಲ್ಲಿ ನಮ್ಮ ಸಂಪರ್ಕಕ್ಕೂ ಬರುತ್ತಾರೆ. ಆದರೆ ಅವರಲ್ಲಿ ನಮ್ಮ ಕೂಟ ಸಂಘಟನೆಗಳಲ್ಲಿ ದಾಖಲುಗೊಂಡಿರುವುದು ಅಲ್ಪ ಸಂಖ್ಯೆಯ ಸದಸ್ಯರು ಮಾತ್ರ. ಆದುದರಿಂದ ಎಲ್ಲ ಕೂಟಬಂಧುಗಳನ್ನು ಒಗ್ಗೂಡಿಸುವ ಕೆಲಸ ಆಗಬೇಕಾಗಿದೆ. ಇದರಿಂದ ಸಮಾಜ ಹೆಚ್ಚು ಹೆಚ್ಚು ಬಲಯುತಗೊಳ್ಳುತ್ತದೆ. ಸದೃಢವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಪಿ.ವೆಂಕಟ್ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಎಂ. ಎಸ್. ಮಹಾಬಲೇಶ್ವರ ದಂಪತಿಗಳನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನ ಇದರ ಆಡಳಿತ ಮಂಡಳಿ ಅಧ್ಯಕ್ಷ ಕೆ. ಪದ್ಮನಾ ಐತಾಳ್ ದೇವಸ್ಥಾನದ ಪರವಾಗಿ ಗುರುಸಂದೇಶವನ್ನು ನೀಡಿದರು.

ಕೂಟಬಂಧು ವಿಶೇಷ ಸಂಚಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆ ಮಾಡಿದರು. ಶ್ರೀಸ್ಥಾನಿಕ ದ್ರಾವಿಡ ಬ್ರಾಹ್ಮಣ ಸಂಘದ ಅಧ್ಯಕ್ಷ ವೈ. ಭುವನೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪಾಂಡೇಶ್ವರ ಶಾಂತಿಮತಿ ಪ್ರತಿಷ್ಠಾನದ ಅಧ್ಯಕ್ಷ ವಿದ್ವಾನ್ ಡಾ.ವಿಜಯ ಮಂಜರಿಂದ ಧಾರ್ಮಿಕ ಪ್ರವಚನ ನಡೆಯಿತು.

ಅಪರಾಹ್ನ ಕೇಂದ್ರ ಸಂಸ್ಥೆಯ ವಾರ್ಷಿಕ ಮಹಾಸಭೆ ನಡೆಯಿತು. ಕೊನೆಯಲ್ಲಿ ಉಡುಪಿ ಅಂಗಸಂಸ್ಥೆಯ ಮಹಿಳಾ ವೇದಿಕೆ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉಡುಪಿ ಅಂಗಸಂಸ್ಥೆ ಅಧ್ಯಕ್ಷ ಕೆ.ಎಸ್. ಕಾರಂತ ಸ್ವಾಗತಿಸಿದರು.ಕೇಂದ್ರ ಸಂಸ್ಥೆ ಕಾರ್ಯದರ್ಶಿ ರಾಮಕೃಷ್ಣ ಐತಾಳ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News