ಮಂಗಳೂರು:ಎಬಿವಿಪಿ ಪ್ರತಿಭಟನೆ

Update: 2017-09-13 07:57 GMT

ಮಂಗಳೂರು, ಸೆ.13: ರಾಜ್ಯದ ಕಾನೂನು ವಿವಿ ಸಹಿತ ಹಲವು ವಿವಿಗಳಿಗೆ ಕುಲಪತಿಗಳನ್ನು ನೇಮಿಸಬೇಕು ಮತ್ತು ಪರೀಕ್ಷಾ ಗೊಂದಲಗಳನ್ನು ನಿವಾರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬುಧವಾರ ನಗರದ ಲಾಲ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸಿತು.

ರಾಜ್ಯದಲ್ಲಿ ಸರಕಾರಿ, ಖಾಸಗಿ ಹಾಗೂ ಡೀಮ್ಡ್ ವಿವಿ ಒಳಗೊಂಡಂತೆ 54 ವಿವಿಗಳನ್ನು ಹೊಂದಿದೆ. ಅದರಲ್ಲೂ ಬೆಂಗಳೂರು ವಿವಿ, ಮೈಸೂರು ವಿವಿ, ರಾಜೀವ್‌ಗಾಂಧಿ ವೈದ್ಯಕೀಯ ವಿವಿ, ಕಾನೂನು ವಿವಿ, ತುಮಕೂರು ವಿವಿ, ಜಾನಪದ ವಿವಿಗಳಿಗೆ ಕುಲಪತಿ ನೇಮಕ ಮಾಡಲು ಸರಕಾರ ಮೀನಮೇಷ ಎಣಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಎಬಿವಿಪಿ ಮಂಗಳೂರು ವಿಭಾಗ ನಗರ ಸಂಚಾಲಕ ಶೀತಲ್ ಕುಮಾರ್ ಜೈನ್, ಕಾರ್ಯಾಲಯ ಕಾರ್ಯದರ್ಶಿ ಶರೂಣ್, ದಕ್ಷಿಣ ವಲಯ ಸಂಚಾಲಕಿ ಪೂಜಾ, ಪೃಥ್ವೇಶ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News