ಶಿಕ್ಷಕರನ್ನು ಗುತ್ತಿಗೆ ಕಾರ್ಮಿಕರಂತೆ ನಡೆಸಿಕೊಳ್ಳುತ್ತಿರುವ ಸರಕಾರ: ಎಸ್‌ಐಒ ತಲ್ಹಾ ಇಸ್ಮಾಯೀಲ್

Update: 2017-09-13 17:09 GMT

 ಮಂಗಳೂರು, ಸೆ. 13: ದೇಶದಲ್ಲಿರುವ ಸರಕಾರಿ ಶಿಕ್ಷಕರನ್ನು ಗುತ್ತಿಗೆ ಕಾರ್ಮಿಕರಂತೆ ಸರಕಾರಗಳು ನಡೆಸಿಕೊಳ್ಳುತ್ತಿರುವುದು ಖೇದನೀಯವಾಗಿದೆ. ಅಭಿವೃದ್ಧಿ ಹೊಂದಿರುವ ಅಮೇರಿಕಾ ಮತ್ತು ಫಿನ್‌ಲ್ಯಾಂಡ್ ನಂತಹ ದೇಶಗಳಲ್ಲಿ ನರ್ಸರಿ ಅಥವಾ ಪ್ರಾಥಮಿಕ ಶಾಲೆಯ ಶಿಕ್ಷಕನಾಗಬೇಕಿದ್ದರೆ ಜ್ಞಾನವೇ ಅವರ ಅರ್ಹತೆಯಾಗಿರುತ್ತದೆ. ಇಂತಹ ಬೆಳವಣಿಗೆ ಭಾರತದಂತಹ ದೇಶದಲ್ಲಿ ನಡೆಯಬೇಕಾದ ಅವಶ್ಯಕತೆ ಇದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್ ಐಒ)ದ ತಲ್ಹಾ ಇಸ್ಮಾಯೀಲ್ ಹೇಳಿದರು.

ಅವರು ಕಸ್ಬಾ ಬೆಂಗ್ರೆಯ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ನಡೆದ ಶಿಕ್ಷಾ ಪಂಚಾಯತ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಉತ್ತಮ ವೇತನ ಹಾಗೂ ಸೌಲಭ್ಯಗಳನ್ನು ನೀಡಿ ಶಿಕ್ಷಕರನ್ನು ಗೌರವಿಸಲಾಗುತ್ತದೆ. ಏಕೆಂದರೆ ಎಳೆ ವಯಸ್ಸಿನ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡುವ ಅವಶ್ಯಕತೆ ಇದೆ ಎಂಬ ಸತ್ಯಾಸತ್ಯತೆಯನ್ನು ಮನಗಂಡಿದೆ. ಆದರೆ ನಮ್ಮ ದೇಶದಲ್ಲಿ ಸರಕಾರವೇ ಶಿಕ್ಷಕರನ್ನು ಗೌರವಿಸುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯಿನಿ ವೆರೊನಿತಾ, ಎಸ್ ಐ ಒ ನ ಶಿಕ್ಷಾ ಪಂಚಾಯತ್‌ನಂತಹ ಕಾರ್ಯಕ್ರಮಗಳು ಸಮಾಜದ ಉತ್ತಮ ಬದಲಾವಣೆಗೆ ನಾಂದಿಯಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷೆ ಖೈರುನ್ನಿಸಾ, ಎಸ್ ಐ ಒ ಮಂಗಳೂರು ನಗರಾಧ್ಯಕ್ಷ ಅಹ್ಮದ್ ಮುಬೀನ್ ಮತ್ತು ರಿಫಾಝ್ ಬೆಂಗ್ರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News