ನಿವೇಶನ ರಹಿತರಿಂದ ಹಕ್ಕುಪತ್ರಕ್ಕಾಗಿ ಗ್ರಾಪಂಗೆ ಮುತ್ತಿಗೆ

Update: 2017-09-14 14:43 GMT

ಕುಂದಾಪುರ, ಸೆ.14: ಶಿರೂರು ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿಗಳ ನೇತೃತ್ವದಲ್ಲಿ ಶಿರೂರು ಗ್ರಾಮದ ಬಡ ನಿವೇಶನ ರಹಿತರು ನಿವೇಶನ ಸ್ಥಳ ಮಂಜೂರು ಮಾಡುವಂತೆ ಆಗ್ರಹಿಸಿ ಇತ್ತೀಚೆಗೆ ಶಿರೂರು ಗ್ರಾಪಂ ಕಛೇರಿ ಮುತ್ತಿಗೆ ಹೋರಾಟ ಕಾರ್ಯಕ್ರಮವನ್ನು ನಡೆಸಿದರು.

ಬಳಿಕ ನಡೆದ ಮನೆ, ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶ ವನ್ನುದ್ದೇಶಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಂಘದ ತಾಲೂಕು ಕಾರ್ಯದರ್ಶಿ ನಾಗರತ್ನ ನಾಡ ಮಾತನಾಡಿದರು.

ಕೃಷಿ ಕೂಲಿಕಾರರ ಸಂಘದ ಮುಖಂಡರಾದ ರಮೇಶ ಪೂಜಾರಿ ಗುಲ್ವಾಡಿ, ಪದ್ಮಾವತಿ ಶೆಟ್ಟಿ, ಕುಶಲ ಹಂಗಳೂರು, ಶ್ಯಾಮಲ ಗುಜ್ಜಾಡಿ, ರಾಜೀವ ಪಡು ಕೋಣೆ, ಗಣೇಶ ಮೊಗವೀರ ಬೈಂದೂರು, ಗಣೇಶ ತೊಂಡೆಮಕ್ಕಿ, ಲಕ್ಷ್ಮಣ ಮೆಸತಿ ಶಿರೂರು, ಶೊಯೆಟ್ ಅರೆಹೊಳೆ, ಅಜಮುತ್ತುಲ್ಲ ಶಿರೂರು, ಗಂಗಾಧರ ಆಚಾರ್ ಮೊದಿನಪುರ, ರೋನಿ ಮೊದಿನಪುರ ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆಯನ್ನು ಮಾಮ್ಡು ಜಿಪ್ರಿ ಕಳಿಹಿತ್ಲು ವಹಿಸಿದ್ದರು. ಶಿರೂರು ಗ್ರಾಮದ ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಮಾಮ್ಡು ಜಿಪ್ರಿ ಕಳಿಹಿತ್ಲು, ಕಾರ್ಯದರ್ಶಿಯಾಗಿ ಅಜ್ಮತ್ತುಲ್ಲ ಶಿರೂರು, ಉಪಾಧ್ಯಕ್ಷರು ಗಳಾಗಿ ಯಾಕೂಬ್ ಬುಡ್ಜ, ಇರ್ಪಾನ್, ಪರಾಸ ಸಲೀಂ, ಜತೆ ಕಾರ್ಯದರ್ಶಿ ಗಳಾಗಿ ಶೂಯೆಟ್ ಅರೆಹೊಳೆ, ಲಕ್ಷ್ಮಣ ಮೆಸ್ತ, ಗಂಗಾಧರ ಆಚಾರ್ ಮೊದಿನಪುರ, ರೋನಿ ಮೊದಿನಪುರ ಇವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News