ರಸ್ತೆ ಓಟ, ಸ್ಕೇಟಿಂಗ್‌ನಲ್ಲಿ ಶುಭ್ರಾ ಜ್ಯೋತ್ಸ್ನಾರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2017-09-14 18:27 GMT

ಮಂಗಳೂರು, ಸೆ.14: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೇಂದ್ರೀಯ ವಿದ್ಯಾಲಯ ಸಂಘಟನ್ ವಲಯ ಕ್ರೀಡಾಕೂಟ -2017ರಲ್ಲಿ ಮಂಗಳೂರು ಕೇಂದ್ರ ವಿದ್ಯಾಲಯದ ವಿದ್ಯಾರ್ಥಿನಿ ಶುಭ್ರಾ ಜ್ಯೋತ್ಸ್ನಾ ಎಸ್. ಅಡ್ಡೂರು ಅವರು ರಸ್ತೆ ಓಟದಲ್ಲಿ ಚಿನ್ನ ಮತ್ತು ರಿಂಕ್ ಐ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚು ಜಯಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

14ರ ವಯೋಮಿತಿಯ ಬಾಲಕಿಯರ ‘ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ -2017’ ಸೆ.15ರಿಂದ 18ರವರೆಗೆ ಭೋಪಾಲ್‌ನ ಕೆವಿ ನಂ.1ನಲ್ಲಿ ನಡೆಯಲಿದೆ.
ಶುಭ್ರಾ ಜ್ಯೋತ್ಸ್ನಾ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ ಸದಸ್ಯೆಯಾಗಿದ್ದು, ಮಹೇಶ್ ಕುಮಾರ್ ತರಬೇತುದಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News