ಕಡಲ ತೀರ ವಲಯ ನಿರ್ವಹಣಾ ಯೋಜನೆಗೆ ಆಕ್ಷೇಪಣೆ ಆಹ್ವಾನ

Update: 2017-09-15 17:16 GMT

ಉಡುಪಿ, ಸೆ.15:ಕರ್ನಾಟಕ ರಾಜ್ಯ ಸರಕಾರ ಸಿಆರ್‌ಝಡ್ ಅಧಿಸೂಚನೆ 2011ರ ಅನುಸಾರ ರಾಜ್ಯದ ಕಡಲ ತೀರ ವಲಯಗಳಿಗಾಗಿ ಕಡಲ ತೀರ ವಲಯ ನಿರ್ವಹಣಾ ಯೋಜನೆಗಳನ್ನು ತಯಾರಿಸುವ ಕಾರ್ಯವನ್ನು ಚೆನ್ನೈನ ಎನ್‌ಸಿಎಸ್‌ಸಿಎಂಗೆ ವಹಿಸಿದೆ.

ಇದರಂತೆ ಸಂಸ್ಥೆಯ 1:25000 ಅಳತೆಯ ನಕಾಶೆಯಲ್ಲಿ ಕರಡು ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಯೋಜನೆ (ಸಿಝಡ್‌ಎಂಸಿ) ಯನ್ನು ತಯಾರಿಸಿದೆ. ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಪ್ರಾಧಿಕಾರವು ಆ.31ರಂದು ಜರಗಿದ ಸಭೆಯಲ್ಲಿ ಈ ಕರಡು ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಯೋಜನೆಯನ್ನು ಪರಿಗಣಿಸಿದ್ದು, ಸಾರ್ವಜನಿಕರಿಂದ ಇದಕ್ಕೆ ಯಾವುದೇ ತಕರಾರುಗಳು ಅಥವಾ ಅನಿಸಿಕೆ ಳನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.

ಅದರಂತೆ ಉಡುಪಿ ಜಿಲ್ಲೆಗೆ ಸಂಬಂಧಿಸಿದ ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆಯ ಕರಡು ನಕಾಶೆಗಳನ್ನು ಪ್ರಾದೇಶಿಕ ನಿರ್ದೇಶಕರು (ಪರಿಸರ), ಕೊಠಡಿ ಸಂಖ್ಯೆ 201, ಮೊದಲನೇ ಮಹಡಿ, ಸಿ ಬ್ಲಾಕ್, ರಜತಾದ್ರಿ, ಮಣಿಪಾಲ, ಉಡುಪಿ ಇಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಗಿದೆ.

ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ಸಲಹೆ, ಆಕ್ಷೇಪಣೆ, ತಕರಾರು ಗಳು ಮತ್ತು ಅನಿಸಿಕೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಪ್ರಾದೇಶಿಕ ನಿರ್ದೇಶಕರು (ಪರಿಸರ) ಉಡುಪಿ ಇವರಿಗೆ ನೀಡಬಹುದು. ಮುಂದಿನ ಅ.23ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲೂ ಅಹವಾಲುಗಳನ್ನು ಸ್ವೀಕರಿಸ ಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News