ತೋಡಾರು: ಯೆನೆಪೋಯ ಕಾಲೇಜಿನಲ್ಲಿ 'ಇಂಜಿನಿಯರ್ಸ್‌ ಡೇ'

Update: 2017-09-16 18:04 GMT

ಮೂಡುಬಿದಿರೆ, ಸೆ. 16: ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಪ್ರಯುಕ್ತ ತೋಡಾರಿನಲ್ಲಿ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಇಂಜಿನಿಯರ್ಸ್‌ ಡೇ’ ಆಚರಿಸಲಾಯಿತು.

ಐಎಸ್‌ಟಿಇ ಸ್ಟೂಡೆಂಟ್ ಚಾಪ್ಟೆರ್ ಸಹಯೋಗದೊಂದಿಗೆ ಕಾಲೇಜಿನ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.

 ಬೆಂಗಳೂರು ಐಐಎಸ್‌ಸಿ-ಸಿಇಡಿಟಿ ನೆಟ್‌ವರ್ಕ್ ಪ್ರಾಜೆಕ್ಟ್‌ನ ಮಾಜಿ ಮುಖ್ಯಸ್ಥ ಡಾ.ಅಶೋಕ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಜಾಗತಿಕ ಮಟ್ಟದಲ್ಲಿ ಅಧುನಿಕ ತಂತ್ರಜ್ಞಾನದ ಉಪಯೋಗ ಮತ್ತು ದುರುಪಯೋಗವಾಗುತ್ತಿರುವುದನ್ನು ಪ್ರಾಸ್ತಾಪಿಸಿದ ಅವರು, ಇಂಜಿನಿಯರ್ಸ್‌ಗಳು ಸಮಸ್ಯೆಗಳನ್ನು ದೂರವಾಗಿಸಲು ತಂತ್ರಜ್ಞಾನ, ತಮ್ಮ ಜ್ಞಾನವನ್ನು ಉಪಯೋಗಿಸಬೇಕೇ ವಿನಃ ಅದರಿಂದ ಸಮಸ್ಯೆಗಳನ್ನು ಸೃಷ್ಟಿಸುವಂತಾಗಬಾರದು. ಯುವ ಇಂಜಿನಿಯರ್‌ಗಳು ಕ್ಷೇತ್ರದಲ್ಲಿ ಉತ್ತಮ ಪರಿಣಿತಿಯನ್ನು ಪಡೆದು ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ ಡಿ’ಸೋಜಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಗಂಗಾಧರ್ ಸ್ವಾಗತಿಸಿದರು. ಪ್ರೊ.ಸುಜಯ್ ‘ಇಂಜಿನಿಯರ್ಸ್‌ ಡೇ’ ಕುರಿತು ಮಾತನಾಡಿದರು. ಕಿರಣ್ ಎ.ಆರ್ ಅತಿಥಿಯನ್ನು ಪರಿಚಯಿಸಿದರು. ವಾಣಿ ಕಾರ್ಯಕ್ರಮ ನಿರೂಪಿಸಿದರು. ಶಶಾಂಕ್ ಎಂ.ಗೌಡ ಕಾರ್ಯಕ್ರಮ ಸಂಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News