ಈಜು ಸ್ಪರ್ಧೆಗಳಲ್ಲಿ ಆಳ್ವಾಸ್‌ನ ಶ್ರವಣ್ ಬೋಳೂರ್ ಸಾಧನೆ

Update: 2017-09-16 18:06 GMT

ಮೂಡುಬಿದಿರೆ, ಸೆ. 16: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ವಿಭಾಗದ ವಿದ್ಯಾರ್ಥಿ ಶ್ರವಣ್ ಬೋಳೂರ್ ಸಾಧನೆ ಮೆರೆದಿದ್ದಾರೆ.

ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಕ್ಲಬ್ ನಲ್ಲಿ ಬಿಎನ್‌ಎಂಐಟಿ ಇಂಜಿನಿಯರಿಂಗ್ ಕಾಲೇಜು ಆಯೋಜಿಸಿದ್ದ ಸ್ಪರ್ಧೆಯಲ್ಲಿ 100 ಮೀ , 200 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ದ್ವಿತೀಯ ಸ್ಥಾನ, 100 ಮೀ ಬಟರ್ ಫ್ಲೈ ವಿಭಾಗದಲ್ಲಿ ತೃತೀಯ ಸ್ಥಾನ , 50 ಮೀ ಫ್ರೀ ಸ್ಟೈಲ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ದಸರಾ ಕ್ರೀಡಾಕೂಟದ ಅಂಗವಾಗಿ ಮಂಗಳೂರಿನ ಮಂಗಳಾ ಕ್ರೀಡಾಂಗಣ ನಡೆದ ಸ್ಪರ್ಧೆಯಲ್ಲಿ ಫ್ರೀ ಸ್ಟೈಲ್ ವಿಭಾಗದ 200 ಮೀ ನಲ್ಲಿ ಮತ್ತು 4x100 ಮೀ ರಿಲೇ ಯಲ್ಲಿ ದ್ವಿತೀಯ ಸ್ಥಾನ, 100 ಮೀ ಬಟರ್ ಫ್ಲೈ, 400 ಮೀ ಫ್ರೀ ಸ್ಟೈಲ್ ಮತ್ತು 200 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ , ಉಪನ್ಯಾಸಕರು ಶ್ರವಣ್ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News