ಸೆ.18: ಪುತ್ತೂರು ಟೋಪ್ಕೋ ಜ್ಯುವೆಲ್ಲರಿಯಲ್ಲಿ 'ವಿವಾಹ' ಯೋಜನೆಗೆ ಚಾಲನೆ

Update: 2017-09-17 08:07 GMT

ಪುತ್ತೂರು, ಸೆ. 17: ಕೋರ್ಟ್ ರಸ್ತೆಯಲ್ಲಿರುವ ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿ ವತಿಯಿಂದ ಅತ್ಯಪೂರ್ವ 'ವಿವಾಹ' ಬಂಗಾರ ಉಳಿತಾಯ ಯೋಜನೆಯು  ಸೆ. 18ರಂದು ಬೆಳಗ್ಗೆ 10 ಗಂಟೆಗೆ ಶೋರೂಮ್ ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಟೋಪ್ಕೋ ಗ್ರೂಪ್ ಆಫ್ ಕಂಪೆನಿಯ ನಿರ್ದೇಶಕರಾದ ಮುಹಮ್ಮದ್ ಟಿ.ಕೆ. ಹಾಗೂ ಜನರಲ್ ಮ್ಯಾನೇಜರ್ ಸಹೀರ್ ಅಹ್ಮದ್ ತಿಳಿಸಿದ್ದಾರೆ.

ವಿವಾಹ ಬಂಗಾರ ಉಳಿತಾಯ ಯೋಜನೆಯನ್ನು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು ಹಾಗೂ ಪುತ್ತೂರು ತಾಲೂಕು ಸ್ತ್ರೀಶಕ್ತಿ ಸಹಕಾರ ಸಂಘದ ಅಧ್ಯಕ್ಷೆ, ನಗರಸಭೆ ಸದಸ್ಯೆ ಝೊಹರಾ ನಿಸಾರ್ ಅಹ್ಮದ್ ಜೊತೆಯಾಗಿ ಉದ್ಘಾಟಿಸಲಿರುವರು.

ನಾವು ದಿನನಿತ್ಯ ಖರ್ಚು ಮಾಡುವ ಸಣ್ಣಪುಟ್ಟ ಮೊತ್ತವನ್ನು ಕ್ರೋಢೀಕರಿಸಿ ಚಿನ್ನಾಭರಣವನ್ನಾಗಿ ಮಾರ್ಪಡಿಸುವ 'ವಿವಾಹ' ಯೋಜನೆಯು ಕಳೆದ 5 ವರ್ಷಗಳ ಹಿಂದೆ ವಿಟ್ಲ ಟೋಪ್ಕೋ ಜ್ಯುವೆಲ್ಲರಿಯಲ್ಲಿ ಪ್ರಾರಂಭಿಸಿ ಇದೀಗ ಅಭೂತಪೂರ್ವ ಯಶಸ್ಸು ಕಂಡಿದೆ. ಅಲ್ಲದೆ ಮನೆಮಾತಾಗಿದೆ. ಅದೇ ಯೋಜನೆಯನ್ನು ಪುತ್ತೂರಿನಲ್ಲೂ ಅಳವಡಿಸಲಾಗುವುದು.

ಮಾಸಿಕ ಕನಿಷ್ಠ 500 ರೂ. ಹೂಡಿಕೆ ಮಾಡಿದರೆ ಆಯಾ ದಿನದ ಮಾರುಕಟ್ಟೆ ದರಕ್ಕೆ ಅನುಸಾರವಾಗಿ ಅಷ್ಟೇ ತೂಕದ ಚಿನ್ನವನ್ನು ಯೋಜನೆಯ ಸದಸ್ಯರ ಹೆಸರಿನಲ್ಲಿ ಭದ್ರತೆಯೊಂದಿಗೆ ಇಡಲಾಗುತ್ತದೆ. 12 ಹಾಗೂ 18 ತಿಂಗಳ ಕಂತಿನ 2 ಯೋಜನೆಗಳಿವೆ. ಉಳಿತಾಯ ಯೋಜನೆಯ ಚಿನ್ನಾಭರಣ ಖರೀದಿ ಸುವಾಗ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಟೋಪ್ಕೋ ಝಮ್ ಝಮ್ ಶೋರೂಮ್ ಗೆ ಭೇಟಿ ನೀಡಬಹುದು ಅಥವಾ 08251 232916 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಸೋಮವಾರ ಬೆಳಗ್ಗೆ ಉದ್ಘಾಟನೆ ಸಮಯದಲ್ಲಿ ಸದಸ್ಯರಾಗುವವರಿಗೆ ವಿಶೇಷ ಗಿಫ್ಟ್ ನ್ನು ಕೂಡಾ ನೀಡಲಾಗುವುದು. ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ಪುತ್ತೂರು ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿ ಸಂಸ್ಥೆ ವಿನಂತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News