ಮಾರಿಪ್ಪಳ್ಳದಲ್ಲಿ ರಸ್ತೆ ಅಪಘಾತ: ಇಬ್ಬರಿಗೆ ಗಾಯ

Update: 2017-09-17 10:23 GMT

ಫರಂಗಿಪೇಟೆ, ಸೆ. 17: ತಾಲೂಕಿನ ಪುದು ಗ್ರಾಮದ ಮಾರಿಪ್ಪಳ್ಳದಲ್ಲಿ ಆಟೋ ರಿಕ್ಷಾ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿದ್ದು, ಘಟನೆಯಿಂದು ಇಬ್ಬರು ಗಾಯಗೊಂಡಿದ್ದಾರೆ.

ಬಿ.ಸಿ.ರೋಡಿನಿಂದ ಪರಂಗಿಪೇಟೆಗೆ ಬರುತ್ತಿದ್ದ ಆಟೋ ರಿಕ್ಷಾ,  ಮಾರಿಪ್ಪಳ್ಳದಲ್ಲಿ  ಕಾರು ಮಧ್ಯೆ ಢಕ್ಕಿ ಸಂಭವಿಸಿ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಾಯಗೊಂಡವರನ್ನು ಫರಾಝ್( 8) ಹಾಗೂ ಸುಲೈಮಾನ್ ಎಮ್ (45) ಎಂದು ಗುರುತಿಸಲಾಗಿದೆ.

ಗಾಯಗೊಂಡವರು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಹೆಚ್ಚಿನ ಚಿಕೆತ್ಸೆಗೆ ಮಂಗಳೂರಿನ ಖಾಸಾಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News