ಕಾಸರಗೋಡು: ಭಾರೀ ಮಳೆ ಹಿನ್ನೆಲೆ; ಶಿಕ್ಷಣ ಸಂಸ್ಥೆಗಳಿಗೆ ರಜೆ

Update: 2017-09-17 14:30 GMT

ಕಾಸರಗೋಡು, ಸೆ. 17: ರಾಜ್ಯದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆ ಸೇರಿದಂತೆ ಕೇರಳದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ  ಸೆ.18ರಂದು ರಜೆ ಘೋಷಿಸಿ  ರಾಜ್ಯ  ಶಿಕ್ಷಣ ಇಲಾಖೆ  ಕಾರ್ಯದರ್ಶಿ  ಆದೇಶ ನೀಡಿದ್ದಾರೆ. 

ಎರಡು ದಿನ  ಭಾರಿ ಮಳೆಗೆ ಸಾಧ್ಯತೆ ಇರುವುದರಿಂದ  ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ನೀಡುವಂತೆ ರಾಜ್ಯ ದುರಂತ ನಿವಾರಣಾ ಪ್ರಾಧಿಕಾರ  ಶಿಫಾರಸು ಮಾಡಿತ್ತು. ಈ ಹಿನ್ನಲೆಯಲ್ಲಿ ಪ್ರೊಫೆಶನಲ್  ಕಾಲೇಜು ಸೇರಿದಂತೆ ಸೋಮವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಸೋಮವಾರ ನಡೆಯಬೇಕಾಗಿರುವ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಜನರು ಮುಂಜಾಗ್ರತಾ  ಕ್ರಮಗಳನ್ನು ತೆಗೆದುಕೊಳ್ಳುವಂತೆ   ಮುನ್ನೆಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News