ರಾ.ಹೆ. ದುರಸ್ತಿಗೆ ಅನುದಾನ ಬಿಡುಗಡೆ: ಪ್ರಮೋದ್ ಆಗ್ರಹ

Update: 2017-09-17 14:36 GMT

ಉಡುಪಿ, ಸೆ.17: ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ‘169ಎ’ರಲ್ಲಿನ ಮಲ್ಪೆ, ಕರಾವಳಿ ಜಂಕ್ಷನ್, ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಪರ್ಕಳದ ವರೆಗಿನ ರಸ್ತೆಯ ದುರಸ್ತಿಗೆ ತಕ್ಷಣ ಅನುದಾನ ಬಿಡುಗಡೆಗೊಳಿಸುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಆಗ್ರಹಿಸಿದ್ದಾರೆ.

 ಈ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿ ನಡೆಯಲು ಬವಣೆ ಪಡುವಂತಹ ಪರಿಸ್ಥಿತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಅನು ದಾನ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ, ದುರಸ್ಥಿ ಮತ್ತು ಅಭಿವೃದ್ಧಿಗೆ ಬಿಡು ಗಡೆಯಾದ ತಕ್ಷಣ ಗರಿಷ್ಠ ಅನುದಾನವನ್ನು ಮಲ್ಪೆ, ಕರಾವಳಿ ಜಂಕ್ಷನ್ ಮಣಿ ಪಾಲ, ಪರ್ಕಳ ಮುಂತಾದ ಪ್ರದೇಶಗಳಿಗೆ ಮೀಸಲಿಟ್ಟು ಕಾಮಗಾರಿಯನ್ನು ತಕ್ಷಣ ನಿರ್ವಹಿಸಬೇಕೆಂದು ಸಚಿವ ಪ್ರಮೋದ್ ಮಧ್ವರಾಜ್ ರಾಜ್ಯ ಲೋಕೋ ಪಯೋಗಿ ಇಲಾಖಾ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಮತ್ತು ಮುಖ್ಯ ಇಂಜಿನಿಯರ್ ಪೇಶ್ವೆಯವರನ್ನು ದೂರವಾಣಿ ಮೂಲಕ ಒತ್ತಾಯಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News