ಕಣಚೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2017-09-17 16:17 GMT

ಕಣಚೂರು, ಸೆ. 17: ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸರಕಾರಿ ಪ್ರೌಢ ಶಾಲೆ ಮಂಚಿ-ಕುಕ್ಕಾಜೆಯಲ್ಲಿ ಲಯನ್ಸ್ ಕ್ಲಬ್ ಕೊಳ್ನಾಡು-ಸಾಲೆತ್ತೂರು ಹಾಗೂ ಯುವಕ ಮಂಡಲ ಮಂಚಿ- ಕುಕ್ಕಾಜೆ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು ಇವರ ಸಹಯೋಗದಲ್ಲಿ ರವಿವಾರ ನಡೆಯಿತು.

ಲಯನ್ಸ್ ಕ್ಲಬ್ ತುಪ್ಪಕಲ್ಲು ನರಸಿಂಹರೆಡ್ಡಿ ಪ್ರಾಂತೀಯ ಅಧ್ಯಕ್ಷ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಣಚೂರು ಆಸ್ಪತ್ರೆಯ ಆಡಳಿತ ನಿರ್ದೇಶಕ ಅಬ್ದುಲ್ ರೆಹಮಾನ್ ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ತಿಳಿಸಿದರು ಮತ್ತು ಇಂದಿನಿಂದ ಮೂರು ತಿಂಗಳವರೆಗೆ ಕಿವಿ, ಮೂಗು, ಗಂಟಲು ವಿಭಾಗದ ಮತ್ತು ಶಸ್ತ್ರ ಚಿಕಿತ್ಸಾ ವಿಭಾಗದ ಹರ್ನಿಯಾ, ಥೈರಾಯಿಡ್ , ಉಬ್ಬಿರುವ ರಕ್ತನಾಳ, (ವೆರಿಕೋಸ್ ವೇನ್,) ಮೂಲವ್ಯಾಧಿ, ಆಂಧ್ರವಾಯು ಮತ್ತು  ಸಂಬಂಧಿತ ಕಾಯಿಲೆಗಳ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯು ಸಂಪೂರ್ಣ ಉಚಿತವಾಗಿ ಮಾಡಲಾಗುವುದು ಎಂದು  ತಿಳಿಸಿದರು.

ಈ ಸಂದರ್ಭ ಕಣಚೂರು ಆಸ್ಪತ್ರೆಯ ಡಾ. ರೋಹನ್ ಮೋನಿಸ್, ಮಂಚಿ ಪಂಚಾಯತ್ ಉಪಾಧ್ಯಕ್ಷೆ,  ಶ್ರೀಯುತ ಮೋಹನ್ ದಾಸ್ ಶೆಟ್ಟಿ ಉಪಾಧ್ಯಕ್ಷರು ಮಂಚಿ ಪಂಚಾಯತ್, ರಝಾಕ್ ಕುಕ್ಕಾಜೆ, ಉಮರ್ ಮಂಚಿ, ಹಮ್ಜಾ ಹಾಗೂ ಲಯನ್ಸ್ ರೇಮಂಡ್ ರೂಸಾರಿಯೊ ಅಧ್ಯಕ್ಷರು, ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಉಪಸ್ಥಿತರಿದ್ದರು. ಡಾ. ಗೋಪಾಲ ಆಚಾರ್  ಸ್ವಾಗತಿಸಿದರು, ಬಾಲಕೃಷ್ಣ ಶೆಟ್ಟಿ ವಂದಿಸಿದರು, ರಮಾನಂದ ನೂಜಿಪಾಡಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News