ಪೌಷ್ಟಿಕತೆಯ ಸಪ್ತಾಹ- ಸ್ವಚ್ಛತಾ ಪಾಕ್ಷಿಕ ಜಾಥಾ

Update: 2017-09-18 11:34 GMT

ಮಣಿಪಾಲ, ಸೆ.18: ಮಣಿಪಾಲ ವಿಶ್ವವಿದ್ಯಾನಿಲಯ, ಡಿಪಾರ್ಟ್ಮೆಂಟ್ ಆಫ್ ಅಲೈಡ್ ಹಾಸ್ಪಿಟಾಲಿಟಿ ಸ್ಟಡೀಸ್ ಮತ್ತು ವೆಲ್ ಕಮ್ ಗ್ರೂಪ್ ಗ್ರ್ಯಾಜು ಯೆಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ ಇವುಗಳ ಜಂಟಿ ಆಶ್ರಯ ದಲ್ಲಿ ಪೌಷ್ಟಿಕತೆಯ ಸಪ್ತಾಹ ಮತ್ತು ಸ್ವಚ್ಛತಾ ಪಾಕ್ಷಿಕ ಆಚರಣಾ ಅಭಿಯಾನ ಜಾಥಾವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಮಣಿಪಾಲ ಕೆಎಂಸಿಯ ಆವರಣದಲ್ಲಿ ಜಾಥಕ್ಕೆ ಹೋಟೆಲ್ ಮ್ಯಾನೇಜ್ ಮೆಂಟ್ ಸ್ಕೂಲ್ನ ಪ್ರಾಂಶುಪಾಲೆ ಪರ್ವದವರ್ಧಿನಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಮೀನಾಕ್ಷಿ ಗರ್ಗ್ ಮತ್ತು ವಲ್ಸರಾಜ್ ಉಪಸ್ಥಿತರಿದ್ದರು.

ಸಹಾಯಕ ಪ್ರೊ.ಗಳಾದ ರಾಘವೇಂದ್ರ ಜಿ., ಪಲ್ಲವಿ ಶೆಟ್ಟಿಗಾರ್, ಸ್ವಾತಿ ಆಚಾರ್ಯ, ನಮ್ರತಾ ಪೈ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕರು, ವ್ಯಾಪಾರಸ್ಥರು ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಉತ್ತಮ ಆರೋಗ್ಯ ನಿರ್ವಹಣೆ ಯಲ್ಲಿ ಆಹಾರಕ್ರಮದ ಪಾತ್ರ ಮತ್ತು ಸ್ವಚ್ಛತೆಯ ಬಗ್ಗೆ ಮಾಹಿತಿಗಳನ್ನು ನೀಡಲಾಯಿತು.

ನಂತರ ತಂಡವು ಮಣಿಪಾಲ ಈಶ್ವರ ನಗರ ವಾರ್ಡ್‌ನ ಆದರ್ಶನಗರ ದಲ್ಲಿರುವ ಎರಡು ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಮತ್ತು ಪೋಷಕರಿಗೆ ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಸ್ವಚ್ಛತೆಯ ವಿಷಯದಲ್ಲಿ ಕಾರ್ಯಾಗಾರ ಮತ್ತು ಅಂಗನವಾಡಿ ಆವರಣದಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.

ಬಾಲವಿಕಾಸ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಎನ್., ಸದಸ್ಯ ರಾದ ಮಂಜುನಾಥ್ ಮಣಿಪಾಲ, ಸುಬ್ರಹ್ಮಣ್ಯ ಪೈ, ಉಮೇಶ್ ಪೈ, ಅಂಗನ ವಾಡಿ ಶಿಕ್ಷಕಿ ಲಲಿತಾ ಎನ್. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News